ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ

26-ANP-P4 NANDITALE
ಆನಂದಪುರ ಸಮೀಪದ ನಂದೀತಳೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಯೋಜಿಸಿದ್ದ ಶಾಲೆಗಳಿಗೆ ನೆರವು ಕಾರ್ಯಕ್ರಮವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ನಾಗರಾಜ್ ಕಲ್ಗುಂಡಿ, ಶರತ್ ನಾಗಪ್ಪ, ದುರ್ಗಪ್ಪ, ಎನ್.ದಿನೇಶ, ದೇವರಾಜ್, ವೇದಾಂತಪ್ಪ ಇತರರಿದ್ದರು.
Published on

ಆನಂದಪುರ: ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೆ ಎಲ್ಲ ರೀತಿಯ ಪ್ರೋತ್ಸಾಹ ದೊರೆಯಲಿ. ಅವರು ಗುಣಾತ್ಮಕ ಶಿಕ್ಷಣ ಪಡೆದು ವಿಶ್ವಮಟ್ಟದ ಸ್ಪರ್ಧೆಗೆ ಸಿದ್ಧಗೊಳ್ಳಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ನಂದೀತಳೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಯೋಜಿಸಿದ್ದ ಧರ್ಮನಿ ಹಣದಿಂದ ಶಾಲೆಗಳಿಗೆ ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಸಂಘವು 65 ವರ್ಷಗಳಿಂದ ಅಭಿವೃದ್ಧಿ ಪಥದಲ್ಲಿ ಸಾಗಿ ಬಂದಿರುವುದು ಗ್ರಾಮೀಣ ಪ್ರದೇಶದ ಸಹಕಾರಿಗಳಿಗೆ ಹೆಮ್ಮೆಯ ವಿಷಯ. ಆರ್ಥಿಕ ಚಟುವಟಿಕೆ ಜತೆಗೆ ಸಾಮಾಜಿಕ, ಶೈಕ್ಷಣಿಕ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.

ಕೇಂದ್ರ ಸರ್ಕಾರದ ನಬಾರ್ಡ್ ಯೋಜನೆಯಿಂದ 2 ವರ್ಷಗಳಿಂದ ರಾಜ್ಯಕ್ಕೆ ಅನುದಾನ ಬಾಕಿ ಇದೆ. ಆದರೂ ಕಾಂಗ್ರೆಸ್ ಸರ್ಕಾರ ಸಹಕಾರ ಕ್ಷೇತ್ರಕ್ಕೆ ನೀಡಬೇಕಾದ ಆರ್ಥಿಕ ನೆರವು ನೀಡುತ್ತಾ ಬಂದಿದೆ ಎಂದರು. ಸಂಘದ ಅಧ್ಯಕ್ಷ ಗುರುಮೂರ್ತಿ ಮಾತನಾಡಿ, ತಮ್ಮ ಸಂಘ 2800 ಜನರ ಸದಸ್ಯತ್ವ ಹೊಂದಿದೆ. ಕಳೆದ ಆರ್ಥಿಕ ವರ್ಷದಲ್ಲಿ 44 ಲಕ್ಷ ರೂ. ಲಾಭ ಪಡೆದಿದೆ. ಧರ್ಮಾರ್ಥ ನಿಯ ಹಣದಿಂದ ಸುತ್ತಮುತ್ತಲ 18 ಸರ್ಕಾರಿ ಶಾಲೆಗಳಿಗೆ ನೆರವು ನೀಡಲಾಗುತ್ತಿದೆ ಎಂದರು.

ಸಂಘದ ಉಪಾಧ್ಯಕ್ಷ ನಾಗರಾಜ್ ಕಲ್ಗುಂಡಿ, ನಿರ್ದೇಶಕರಾದ ಶರತ್ ನಾಗಪ್ಪ, ಸಿಡಿಯಾಪುರದ ದುರ್ಗಪ್ಪ, ಐಗಿನಬೈಲು ಎನ್.ದಿನೇಶ, ದೇವರಾಜ್, ವೇದಾಂತಪ್ಪ, ಮೇಘರಾಜ, ಜಯಲಕ್ಷ್ಮೀ, ಕೃಷ್ಣವೇಣಿ, ನಾಗರಾಜ್, ಲೋಕೇಶ, ಕಾಂಗ್ರೆಸ್ ಮುಖಂಡರಾದ ಕಲಸೆ ಚಂದ್ರಪ್ಪ, ಗಣಪತಿ ಮಂಡಗಳಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net