ಗ್ರಾಮೀಣ ವಿದ್ಯಾರ್ಥಿಗಳ ಆಶಾಕಿರಣ ಶ್ರೀ ನೂತನ್ ಎಜುಕೇಶನ್ ಆ್ಯಂಡ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿ

CTD 13 NUTAN-01
Published on


ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಸಿದ್ದಾಪುರದ ಶ್ರೀ ನೂತನ್ ಎಜುಕೇಶನ್ ಆ್ಯಂಡ್ ರೂರಲ್ ಡೆವಲೆಪ್‌ಮೆಂಟ್ ಸೊಸೈಟಿ, ವಿಶೇಷವಾಗಿ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಹೆಜ್ಜೆ ಹಾಕುತ್ತಿದೆ. ಐಟಿಐ ಕಾಲೇಜು, ಎಲ್‌ಕೆಜಿ, ಯುಕೆಜಿಯೊಂದಿಗೆ 2009ರಲ್ಲಿ ಪ್ರಾರಂಭವಾದ ಈ ಅನುದಾನ ರಹಿತ ಸಂಸ್ಥೆ ಇವತ್ತು ಪಿಯು ಕಾಲೇಜುವರೆಗೆ ಬೆಳೆದಿದೆ.
ಆರಂಭದ ಕೆಲವು ವರ್ಷಗಳ ಯಶಸ್ಸಿನ ಬಳಿಕ 2014 ರ ಆಸುಪಾಸಿನ ವರ್ಷಗಳಲ್ಲಿ ಎದುರಾದ ಕೆಲವು ಸಮಸ್ಯೆಗಳಿಂದ ಕುಗ್ಗದೆ ದಿಟ್ಟತನದಿಂದ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ ಅದರ ಸ್ಥಾಪಕ ಅಧ್ಯಕ್ಷ ಜಿ.ರಾಘವೇಂದ್ರ.
ಗ್ರಾಮೀಣರು, ಅದರಲ್ಲೂ ಕಡು ಬಡವರಿಗೆ ಶಿಕ್ಷಣ ಸಿಗಬೇಕು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗಬೇಕೆಂಬ ಉದ್ದೇಶದಿಂದ ರಾಘವೇಂದ್ರ ಅವರು, ಸಿದ್ದಾಪುರ ಭೀಮಸಮುದ್ರ ರಸ್ತೆಯಲ್ಲಿರುವ ಎರಡೂವರೆ ಎಕರೆ ಜಾಗದಲ್ಲಿ ಇಂಗ್ಲಿಷ್ ಮೀಡಿಯಂ ಶಾಲಾ, ಕಾಲೇಜು ಸ್ಥಾಪಿಸಿದ್ದಾರೆ. ಮುಂದಿನ ವರ್ಷದಿಂದ ಪಿಯು 50 ವಿದ್ಯಾರ್ಥಿ ಸಾಮರ್ಥ್ಯದ ರೆಸಿಡೆನ್ಶಿಯಲ್ ಕಾಲೇಜು ಸ್ಥಾಪನೆ ಆಗಲಿದೆ.
ಆರಂಭದ ಹಲವು ವರ್ಷಗಳಲ್ಲಿ ಎಲ್‌ಕೆಜಿಯಿಂದ 10 ನೇ ತರಗತಿ ಹಾಗೂ ಐಟಿಐ ಕಾಲೇಜು ಸೇರಿ 800 ಕ್ಕೂ ಹೆಚ್ಚಿದ್ದ ವಿದ್ಯಾರ್ಥಿಗಳ ಸಂಖ್ಯೆ, ನಂತರದ ಕೆಲವು ವರ್ಷಗಳಲ್ಲಿ 68ಕ್ಕೆ ಕುಸಿದಿತ್ತು. ಆದರೆ, ಅದಕ್ಕೆ ಅಂಜದೆ ವಿದ್ಯಾರ್ಥಿಗಳ ಸಂಖ್ಯೆಯನ್ನು 600 ಕ್ಕೆ ತಲುಪುವಂತೆ ಹಾಗೂ 2022-23ನೇ ಸಾಲಿನಿಂದ ಪಿಯುಸಿ ಸೈನ್ಸ್ ಮತ್ತು ಕಾಮರ್ಸ್ ಕಾಲೇಜನ್ನೂ ಸ್ಥಾಪಿಸುವಲ್ಲಿ ರಾಘವೇಂದ್ರ ಯಶಸ್ವಿಯಾಗಿದ್ದಾರೆ.

ವಿದ್ಯಾಧನ್ ಕರ್ನಾಟಕ ಯೋಜನೆಗೆ ಆಯ್ಕೆ
ಕಾಲೇಜಿನಲ್ಲಿ ಸದ್ಯಕ್ಕೆ ಸೈನ್ಸ್ ಕೋರ್ಸ್ ಆರಂಭವಾಗಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಕಾಮರ್ಸ್ ಕೋರ್ಸ್ ಕೂಡ ಪ್ರಾರಂಭವಾಗಲಿದೆ. ಸಂಸ್ಥೆಯಲ್ಲಿ 45 ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದಾರೆ. ಪಿಯು ವಿದ್ಯಾರ್ಥಿನಿಯೊಬ್ಬರು, ಬೆಂಗಳೂರು ಸರೋಜಿನಿ ದಾಮೋದರನ್ ಫೌಂಡೇಶನ್ ವಿದ್ಯಾಧನ್ ಕರ್ನಾಟಕ ಯೋಜನೆಗೆ ಆಯ್ಕೆಯಾಗಿದ್ದಾರೆ. ಪಿಯು ನಂತರದ ಉನ್ನತ ವಿದ್ಯಾಭ್ಯಾಸಕ್ಕೆ ಸಂಸ್ಥೆ ಈ ವಿದ್ಯಾರ್ಥಿನಿಗೆ ಆರ್ಥಿಕ ನೆರವು ಒದಗಿಸಲಿದೆ. ಇನ್ನೂ ಮೂವರು ವಿದ್ಯಾರ್ಥಿಗಳು ಈ ಸೌಲಭ್ಯದ ನಿರೀಕ್ಷೆಯಲ್ಲಿ ಇದ್ದಾರೆ.

ಕೋವಿಡ್‌ನಲ್ಲಿ ಸಹಾಯ
ಕೋವಿಡ್ ಸಂಕಷ್ಟದ ಸಮಯದಲ್ಲಿ 16 ಸಾವಿರ ರೇಷನ್‌ಕಿಟ್, 80 ಸಾವಿರ ಮಾಸ್ಕ್, 1800 ಮೆಡಿಕಲ್ ಕಿಟ್ ವಿತರಣೆ ಹಾಗೂ ಕೆಲ ಟ್ಡಜಛ್ಞಿ ್ಚಟ್ಞ್ಚಛ್ಞಿಠ್ಟಿಠಿಟ್ಟ ಗಳ ಮೂಲಕ ಸಮಾಜಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ.

*ಕೋಟ್
ತಂದೆ-ತಾಯಿ ಇಲ್ಲದ, ಸಿಂಗಲ್ ಪೇರೆಂಟ್ ಇರುವ, ಕಡು ಬಡತನದಲ್ಲಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ವ್ಯವಸ್ಥೆ ಕಲ್ಪಿಸಿದ್ದೇವೆ. ಉಳಿದ ವಿದ್ಯಾರ್ಥಿಗಳಿಂದ ಶಾಲಾ, ಕಾಲೇಜು ಹಾಗೂ ವಾಹನ ಶುಲ್ಕ ಪಡೆಯುತ್ತಿದ್ದೇವೆ. ಡೊನೇಷನ್ ಪಡೆಯುವುದಿಲ್ಲ. ಕೆಲವು ಎನ್‌ಜಿಒ ಸಂಸ್ಥೆಗಳು ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಗೆ ನೆರವಾಗುತ್ತಿವೆ. ಎಲ್‌ಕೆಜಿಯಿಂದ ಕಾಲೇಜುವರೆಗೂ ನೂರು ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ.
ಜಿ.ರಾಘವೇಂದ್ರ, ಅಧ್ಯಕ್ಷರು, ಎಸ್‌ಎನ್‌ಇಡಿಆರ್‌ಎಸ್, ಸಿದ್ದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net