ಗ್ರಾಮೀಣ ವಿದ್ಯಾರ್ಥಿ ಚಂದನ್ ಸಾಧನೆ ಮಾದರಿ

nrp student
ಮುತ್ತಿನಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಚಂದನ್‌ನನ್ನು ಯುವ ಕಾಂಗ್ರೆಸ್ ಘಟಕದಿಂದ ಪುರಸ್ಕರಿಸಲಾಯಿತು. ಶ್ರೀಜಿತ್ ಗೌಡ, ರಥನ್ ಗೌಡ ಅರಗಿ, ಶಶಿಕುಮಾರ್, ಮಂಜೇಶ್, ಸಿರೀಶ್ ಇದ್ದರು.
Published on

ಎನ್.ಆರ್.ಪುರ: ಗ್ರಾಮೀಣ ಪ್ರದೇಶದಲ್ಲಿ ಸೌಲಭ್ಯಗಳು ಕಡಿಮೆ ಇದ್ದರೂ ಉತ್ತಮ ವ್ಯಾಸಂಗ ಮಾಡಿ ಮುತ್ತಿನಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಚಂದನ್ ಸಾಧನೆ ಇತರರಿಗೆ ಸ್ಫ್ಪೂರ್ತಿಯಾಗಲಿ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶ್ರೀಜಿತ್ ಗೌಡ ತಿಳಿಸಿದರು.

ಮುತ್ತಿನಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಯುವ ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ನಮ್ಮೂರ ಹೆಮ್ಮೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಚಂದನ್‌ನನ್ನು ಪುರಸ್ಕರಿಸಿ ಮಾತನಾಡಿ, ಯುವ ಕಾಂಗ್ರೆಸ್ ಘಟಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಲು ನಮ್ಮೂರ ಹೆಮ್ಮೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರತನ್ ಗೌಡ ಅರಗಿ ಮಾತನಾಡಿ, ಕಠಿಣ ಪರಿಶ್ರಮದಿಂದ ಚಂದನ್ ಮುತ್ತಿನಕೊಪ್ಪ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಬೇರೆ ವಿದ್ಯಾರ್ಥಿಗಳು ಸಹ ಇದೇ ರೀತಿ ಹೆಚ್ಚಿನ ಅಂಕ ಪಡೆಯಲಿ ಎಂಬುದೇ ಯುವ ಕಾಂಗ್ರೆಸ್ ಆಶಯ. ತಾಲೂಕಿನ ವಿವಿಧ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಮ್ಮೂರ ಹೆಮ್ಮೆ ಕಾರ್ಯಕ್ರಮದಡಿ ಸನ್ಮಾನಿಸುತ್ತಿದ್ದೇವೆ ಎಂದರು.

ಮುತ್ತಿನಕೊಪ್ಪ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಶಿಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜೇಶ್, ಮುತ್ತಿನಕೊಪ್ಪ ಬೂತ್ ಕಾಂಗ್ರೆಸ್ ಅಧ್ಯಕ್ಷ ಸಿರೀಶ್, ಮುಖಂಡರಾದ ಮುತ್ತಿನಕೊಪ್ಪ ಬಿನು, ಕಣಿವೆ ಅವಿನಾಶ್, ಚಂದನ್ ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net