ಗ್ರಾಮೀಣ ರೈತರಲ್ಲಿ ವರ್ಗದಲ್ಲಿ ಜಾಗೃತಿ ಮೂಡಿಸಿ

25ydg01
Published on


ಯಾದಗಿರಿ: ಮುಂಗಾರು ಹಂಗಾಮಿನ ರೈತ ಸುರಕ್ಷಾ-ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಬಗ್ಗ ರೈತಾಪಿ ವರ್ಗದಲ್ಲಿ ಅರಿವು ಮೂಡಿಸುವಂತೆ ಸಂಬಂಸಿದ ಅಕಾರಿಗಳಿಗೆ ಜಿಲ್ಲಾಕಾರಿ ಡಾ.ಸುಶೀಲಾ ಬಿ., ನಿದರ್ೇಶನ ನೀಡಿದ್ದಾರೆ.
ಇಲ್ಲಿನ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಬೆಳೆ ವಿಮೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಹಸಿ ಮೆಣಸಿನಕಾಯಿ, ದ್ರಾಕ್ಷಿ, ಪಪ್ಪಾಯ ಹಾಗೂ ದಾಳಿಂಬೆ ಬೆಳೆಗಳ ಹವಾಮಾನ ಆಧಾರಿತ ಬೆಳೆಗಳಿಗೆ ರೈತರು ವಿಮಾ ಯೋಜನೆಯಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಅಕಾರಿಗಳು ಮನವರಿಕೆ ಮಾಡಿಕೊಡಬೇಕು ಎಂದರು.
ತೋಟಗಾರಿಕೆ ಬೆಳೆಗಳ ಬಗ್ಗೆ ಗ್ರಾಮೀಣ ಭಾಗದಲ್ಲಿ ರೈತಾಪಿ ವರ್ಗದಲ್ಲಿ ತಿಳಿವಳಿಕೆ ಮೂಡಿಸುವ ಕೆಲಸವಾಗಬೇಕು. ಹಸಿ ಮೆಣಸಿನಕಾಯಿಗೆ ಪ್ರತಿ ಹೆಕ್ಟೇರ್ಗೆ 3,550 ರೂ. ವಿಮಾ ಪಾವತಿಸಿದರೆ 71,000 ರೂ. ಪರಿಹಾರ ಸಿಗಲಿದೆ. ಅದರಂತೆ ಮೊತ್ತ ಸಿಗಲಿದೆ. ಅದರಂತೆ ದ್ರಾಕ್ಷಿಗೆ 14 ಸಾವಿರ ಪಾವತಿಸಿದ್ದಲ್ಲಿ 2.80 ಲಕ್ಷ ರೂ.ಸಿಗಲಿದೆ. ಬೆಳೆ ಸಾಲ ಪಡೆದ ಮತ್ತು ಪಡೆಯದ ರೈತರಿಗೆ ವಿಮಾ ಕಂತಿನ ಮೊತ್ತ ಒಂದೇ ಆಗಿರುತ್ತದೆ. ಈ ಯೋಜನೆಯ ಲಾಭ ಪಡೆಯಬೇಕಾದರೆ ರೈತರು ಪ್ರಸಕ್ತ ಸಾಲಿನ ಪಹಣಿ, ಆಧಾರ ಕಾಡರ್್ ಝರಾಕ್ಸ್ ಪತ್ರಿ ಹಾಗೂ ಬ್ಯಾಂಕ್ ಪಾಸ್ಬುಕ್ ಪ್ರತಿಯೊಂದಿಗೆ ಹತ್ತಿರದ ಗ್ರಾಮ-ಒನ್ ಕೇಂದ್ರ, ಬ್ಯಾಂಕ್ಗಳಲ್ಲಿ ಮತ್ತು ಸಿಎಸ್ಸಿ ಕೇಂದ್ರಗಳಲ್ಲಿ ಜು.31ರೊಳಗೆ ಪ್ರೀಮಿಯಂ ಮೊತ್ತ ಕಟ್ಟಿ ನೋಂದಾಯಿಸಕೊಳ್ಳಬಹುದು ಎಂದು ವಿವರಿಸಿದರು.
ಇದೇ ವೇಳೆ ಜಿಲ್ಲಾಕಾರಿಗಳು ಬೆಳೆವಿಮೆ ಕುರಿತ ಬಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು. ಜಿಪಂ ಸಿಇಒ ಗರೀಮಾ ಪನ್ವಾರ, ಅಪರ ಜಿಲ್ಲಾಕಾರಿ ಶರಣಬಸಪ್ಪ ಕೋಟೆಪ್ಪಗೊಳ, ವಲಯ ಅರಣ್ಯ ಸಂರಕ್ಷಣಾಕಾರಿ ಖಾಜಲ್ ಪಾಟೀಲ, ತೋಟಗಾರಿಕೆ ಇಲಾಖೆ ಉಪನಿದರ್ೇಶಕ ಮಂಜುನಾಥ ಅಂಗಡಿ,  ಕೃಷಿ ಜಂಟಿ ನಿದರ್ೇಶಕ ಅಬೀದ್ ಇದ್ದರು.
-----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net