ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಬದ್ಧ

2
Published on

ಯರಗಟ್ಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸತೀಶ ಜಾರಕಿಹೊಳಿ ಅವರ ಸಹಕಾರದಿಂದ ಲೋಕೋಪಯೋಗಿ ಇಲಾಖೆಯಲ್ಲಿ ಸಾಕಷ್ಟು ಅಭಿವದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದ್ದು, ಬರುವ ದಿನಗಳಲ್ಲಿ ಇನ್ನೂ ಮಹತ್ತರ ಯೋಜನೆಗಳನ್ನು ಕೆಗೆತ್ತಿಕೊಳ್ಳಲಾಗುವುದು ಎಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು.

ಸಮೀಪದ ಯರಝರ್ವಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ 15 ಕೋಟಿ ರೂ. ಮೊತ್ತದ ರಸ್ತೆ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಯರಝರ್ವಿ, ಕಡಬಿ, ಶಿವಾಪುರ ಮಾರ್ಗದ ಈ ರಸ್ತೆ ಅಭಿವದ್ಧಿಯಿಂದ ಇಲ್ಲಿನ ಜನರಿಗೆ ಬಹಳಷ್ಟು ಅನುಕೂಲವಾಗಿದೆ ಎಂದರು. ಗ್ರಾಪಂ ಅಧ್ಯೆ ಬಸವ್ವ ನಂದಿ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಶಂಕರ ಇಟ್ನಾಳ, ಎಪಿಎಂಸಿ ಅಧ್ಯ ನೀಲಕಂಠ ಸಿದ್ದಬಸನ್ನವರ, ಪ್ರಕಾಶ ವಾಲಿ, ಚಾಯಪ್ಪ ಹುಂಡೆಕರ, ಕೀರಪ್ಪ ಹದ್ದನ್ನವರ, ಲಕ್ಷ$್ಮಣ ಕುಂಟಿರಪ್ಪಗೋಳ, ನಿಖಿಲ ಪಾಟೀಲ, ಬಸವರಾಜ ಚಳಕೊಪ್ಪ, ಮಲ್ಲಪ ಒಂಟಮುರಿ, ಮಾದೇವ ದಾಸಪ್ಪನವರ, ಸಿದ್ದಪ್ಪ ದಾಸಪ್ಪನವರ, ದುಂಡಪ್ಪ ಕೊಡೊಳ್ಲಿ ಇತರರು ಇದ್ದರು.
--------------=============

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net