ಗ್ರಾಮೀಣ ಭಾಗದಲ್ಲಿ ಕನ್ನಡ ಸುಭದ್ರ

ldh kasapa
ಉಡೇವಾ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ ಉದ್ಘಾಟಿಸಿದರು. ತಮ್ಮಯ್ಯ , ನಾಗೇಶ್, ಬಿ.ಸಿ.ಚಂದ್ರಶೇಖರ್ ಇತರರಿದ್ದರು.
Published on

ಲಿಂಗದಹಳ್ಳಿ: ಗ್ರಾಮೀಣ ಭಾಗದಲ್ಲಿ ಕನ್ನಡ ಅಸ್ಮಿತೆ ಉಳಿದಿದ್ದು, ಆಧುನಿಕ ಭರಾಟೆಯಲ್ಲಿ ಭಾಷೆಯನ್ನು ಉಳಿಸಬೇಕು ಎಂದು ತರೀಕೆರೆ ತಾಲೂಕು ಕನ್ನಡ ಸಾಹಿತ್ ಪರಿಷತ್ ಅಧ್ಯಕ್ಷ ರವಿ ದಳವಾಯಿ ಹೇಳಿದರು.

ಲಿಂಗಹದಳ್ಳಿ ಹೋಬಳಿಯ ಉಡೇವಾ ಗ್ರಾಮದ ಪಟೇಲ್ ಮೂಡ್ಲೇಗೌಡ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ನಾಡು ನುಡಿ, ನೆಲ ಜಲದ ವಿಷಯದಲ್ಲಿ ಯಾವುದೇ ರಾಜಿಗೂ ಆಸ್ಪದವಿಲ್ಲದಂತೆ ಕನ್ನಡ ಸಾಹಿತ್ಯ ಪರಿಷತ್ ಶ್ರಮಿಸುತ್ತಿದೆ ಎಂದು ಹೇಳಿದರು. ಲಿಂಗದಹಳ್ಳಿ ಹೋಬಳಿ ಕಸಾಪ ಅಧ್ಯಕ್ಷ ತಮ್ಮಯ್ಯ ಮಾತನಾಡಿ, ಕಸಾಪ ಹೋಬಳಿ ಘಟಕ ಮನೆ ಮನೆಯಲ್ಲಿಯೂ ಕನ್ನಡದ ಕಂಪನ್ನು ಹರಡುವಂತೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಓಂಕಾರಪ್ಪ, ಕಸಾಪ ನಾಗೇಶಪ್ಪ, ಶಿಕ್ಷಕರಾದ ಎಸ್.ಎಂ.ಜಯಣ್ಣ, ತಿಮ್ಮಪ್ಪ, ಜ್ಯೋತಿ, ಬಿ.ಸಿ.ಚಂದ್ರಶೇಖರ್, ಪಿ.ಪ್ರಸನ್ನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net