

ಬಾಗಲಕೋಟೆ: ಬಾಗಲಕೋಟೆಯ ಡಾ.ಕಟ್ಟಿ ಆಸ್ಪತ್ರೆ ವತಿಯಿಂದ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದ ವಿಜಯ ಮಾಧ್ಯಮ ಶಾಲೆಯಲ್ಲಿ ಭಾನುವಾರ ಆರೋಗ್ಯ ತಪಸಣಾ ಶಿಬಿರ ಉಚಿತವಾಗಿ ಜರುಗಿತು, ಅಂದಾಜು ೩೫೦ ಕ್ಕೂ ಹೆಚ್ಚು ಜನ ಇದರ ಸದುಪಯೋಗ ಪಡೆದುಕೊಂಡರು.
ಗ್ರಾ.ಪಂ ಅಧ್ಯಕ್ಷೆ ಶಾಂತಾ ಬಂಡಿವಡ್ಡರ ಮಾತನಾಡಿ, ಗ್ರಾಮೀಣ ಭಾಗದ ಜನ ಆರೋಗ್ಯ ಸೇವೆ ದೊರೆಯುವುದು ದುರ್ಲಬವಾಗಿದೆ. ಬಡವರು, ಕಾರ್ಮಿಕರು, ಮಧ್ಯಮ ವರ್ಗದ ಜನರು ಪರದಾಡುತ್ತಾರೆ. ದೊಡ್ಡ ನಗರಗಳಿಗೆ ತೆರಳಿ ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಉಚಿತವಾಗಿ ಆರೋಗ್ಯ ಶಿಬಿರ ನಡೆಸುವುದರಿಂದ ಸಾಕಷ್ಟು ಅನುಕೂಲವಾಗಲಿದೆ. ಡಾ.ಕಟ್ಟಿ ಆಸ್ಪತ್ರೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಡಾ.ಎಚ್.ಆರ್.ಕಟ್ಟಿ, ಡಾ.ಮಂಜುದೇವ ನಕ್ಕರಗುಂದಿ, ಡಾ.ವಿರೇಶ ನಾಗಠಾಣ, ಡಾ.ಶೈಲೇಶಕುಮಾರ ಎಮ್ಮಿ, ಡಾ.ಶ್ರೀಧರ ಕಟಾವಕರ, ಡಾ.ಸಂತೋಷ ಜಡಿಮಠ, ಡಾ.ಅಮರೇಶ ದೇಗಿನಾಳ, ಡಾ.ಪವನ ಕಾಮಗೊಂಡ, ಡಾ.ಗಿರೀಶ ಮೇಟಿ, ಡಾ.ಸ್ನೇಹಾ ಕಿದ್ರಾಪುರ, ಡಾ.ಸ್ನೇಹಾ ಕಿದ್ರಾಪುರ, ಡಾ.ಸಂತೋಷ ಮಾಲಶೆಟ್ಟಿ, ಡಾ.ಶ್ರವಣಕುಮಾರ ಮಾಸೂರಕರ ಆರೋಗ್ಯ ತಪಾಸಣೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಯಲ್ಲಪ್ಪ ಅರಮನಿ ಇದ್ದರು.