

ಕರಜಗಿ: ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡಿದರೆ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುತ್ತದೆ ಎಂದು ಶಾಸಕ ಎಂ.ವೈ.ಪಾಟೀಲ್ ಹೇಳಿದರು.
5 ಕೋಟಿ ರೂ. ವೆಚ್ಚದಲ್ಲಿ ಹೈದ್ರಾದಿಂದ ಕಡಣಿ ಬ್ಯಾರೇಜ್‌ವರೆಗಿನ 3 ಕಿಮೀ. ರಸ್ತೆ ನಿರ್ಮಾಣ ಕಾಮಗಾರಿಗೆ ಶನಿವಾರ ಅಡಿಗಲ್ಲು ನೆರವೇರಿಸಿ ಮಾತನಾಡಿ, ಈಗಾಗಲೇ 19 ಚೆಕ್ ಡ್ಯಾಮ್‌ಗಳನ್ನು ನಿರ್ಮಿಸಲಾಗಿದೆ. ಇದರಿಂದ ಮಳೆಗಾಲದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿ ಅಂತರ್ಜಲಮಟ್ಟ ವೃದ್ಧಿ ಆಗಲಿದೆ. ಗೊಬ್ಬೂರ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕರಜಗಿಯಲ್ಲಿ ಗ್ರಾಮೀಣ ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ 5 ಎಕರೆ ಜಮಿನು ಅಗತ್ಯವಿದೆ. ಯಾರಾದರೂ ಭೂಮಿ ನೀಡಿದರೆ ಶೀಘ್ರದಲ್ಲಿ ಸ್ಟೇಡಿಯಂ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ತಾಪಂ ಮಾಜಿ ಉಪಾಧ್ಯP್ಷÀ ಭೀಮಾಶಂಕರ ಹೊನ್ನಕೇರಿ, ಮುಖಂಡರಾದ ಶರಣು ಕುಂಬಾರ, ರಮೇಶ ಪೂಜಾರಿ ಮಾತನಾಡಿದರು.
ಗ್ರಾಪಂ ಅಧ್ಯP್ಷÀ ಮಲ್ಲಮ್ಮ ಪಾಠೋಳಿ, ತಹಸೀಲ್ದಾರ್ ಸಂಜುವಕುಮಾರ ದಾಸರ, ಪ್ರಮುಖರಾದ ಲಕ್ಷಿö್ಮÃಕಾಂತ ಬಿರಾದಾರ, ಪ್ರಕಾಶ ಜಮಾದಾರ, ರಾಮಣ್ಣ ನಾಯ್ಕೋಡಿ, ಸಂತೋಷ ಸಜ್ಜನ್, e್ಞÁನೇಶ್ವರಿ ಪಾಟೀಲ್, ಮಹಾದೆವ ಕರೂಟಿ, ಬಿಸ್ಮಿ¯್ಲÁ, ಅನುಸುಯಾ ಸುಲೇಕರ, ಶಿವಾನಂದ, ಇರ್ಫಾನ್ ಜಮಾದಾರ, ಶರಣು ಈಶ್ವರಗೊಂಡ, ಖಾಜಾಬಾಯಿ ಚೌದರಿ, ಅಂಬಣ್ಣ ನರಗೋದಿ ಇತರರಿದ್ದರು.