ಗ್ರಾಮೀಣ ಭಾಗಕ್ಕೂ ಸಿಗಲಿ ಆಯುರ್ವೇದ ಚಿಕಿತ್ರೆ

Published on

ಹೊಸಪೇಟೆ: ಆಯುರ್ವೇದ ಭಾರತೀಯ ಮೂಲ ವೈದ್ಯಕೀಯ ಪದ್ದತಿ. ಅರಿವು ಮೂಡಿಸುವುದು ದಿನಾಚರಣೆ ಉದ್ದೇಶವಾಗಿದೆ ಎಂದು ಗ್ಯಾರಂಟಿ ಯೋಜನೆಯ ಅನುಸ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆಯಿಂದ ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಮಂಗಳವಾರ 10ನೇ ರಾಷ್ಟಿçÃಯ ಆಯುರ್ವೇದ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಧನ್ವಂತರಿ ಜಯಂತಿ ದಿನವನ್ನು ರಾಷ್ಟಿçÃಯ ಆಯುರ್ವೇದ ದಿನ ಎಂದು ಆಚರಣೆ ಮಾಡಲಾಗುತ್ತದೆ. ಧನ್ವಂತರಿ ಆಚರ್ಯ ಅವರನ್ನು ಆಯುರ್ವೇದದ ಪಿತಾಮಹ ಎನ್ನುತ್ತಾರೆ. ಇದೊಂದು ಅತ್ಯಂತ ಹಳೆಯ ವೈದ್ಯಕೀಯ ಪದ್ಧತಿ ಆಗಿದ್ದು, ಗ್ರಾಮೀಣ ಭಾಗದಲ್ಲಿನ ಜನರಿಗೆ ಆಯುರ್ವೇದದ ಮಹತ್ವ ಅರಿಯುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಕಡಿಮೆ ವೆಚ್ಚದಲ್ಲಿ ಆಯುರ್ವೇದ ಚಿಕಿತ್ಸಾ ವಿಧಾನದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಶಾಶ್ವತ ಆರೋಗ್ಯ ಪರಿಹಾರಗಳು ಸಿಗಲಿವೆ ಎಂದರು.

ಆಯುಷ್ ಫೆಡೆರೇಷನ್ ಆಪ್ ಇಂಡಿಯಾ (ಎಎಫ್‌ಐ) ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೇದಾರೇಶ್ವರ ದಂಡಿನ್ ಮಾತನಾಡಿ, ಆಯುರ್ವೇದ ಚಿಕಿತ್ಸೆ ದೇಹವನ್ನು ಒಳಗಿನಿಂದ ಬಲಪಡಿಸುವ ಮೂಲಕ ಕಾಯಿಲೆಗಳನ್ನು ಗುಣಪಡಿಸುವ ಗುರಿಯನ್ನು ಹೊಂದಿದೆ. ಪಂಚಕರ್ಮ ಚಿಕಿತ್ಸೆಗಳು, ಆಹಾರ ನಿಯಂತ್ರಣ (ಪಥ್ಯ), ಹಾಗೂ ವಿಶೇಷ ಮಸಾಜ್‌ಗಳು ಆಯುರ್ವೇದ ಚಿಕಿತ್ಸೆಗಳ ಪ್ರಮುಖ ಭಾಗಗಳಾಗಿದ್ದು, ಆಯುರ್ವೇದದ ಚಿಕಿತ್ಸೆಗಳು ರೋಗದ ಮೂಲ ಕಾರಣವನ್ನು ತಲುಪುತ್ತವೆ. ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ಸಮಗ್ರವಾಗಿ ಸುಧಾರಿಸುತ್ತವೆ. ಆಯುರ್ವೇದವು ಒಬ್ಬ ವ್ಯಕ್ತಿಯ ದೋಷದ ಸ್ಥಿತಿ, ವಯಸ್ಸು ಮತ್ತು ರೋಗದ ಪ್ರಕರವನ್ನು ಆಧರಿಸಿ ವೈಯಕ್ತಿಕ ಚಿಕಿತ್ಸೆಯನ್ನು ನೀಡುತ್ತದೆ ಎಂದರು.

ಸAಘದ ಜಿಲ್ಲಾಧ್ಯಕ್ಷ ಡಾ.ಕೆ.ಎಚ್.ಗುರುಬಸವರಾಜ್, ವೈದ್ಯಾಧಿಕಾರಿ ಡಾ.ಮುನಿವಾಸುದೇವ ರೆಡ್ಡಿ, ಪ್ರಮುಖರಾದ ಡಾ.ಬಿ.ವಿ.ಭಟ್, ಡಾ.ಪ್ರಸಾದ್ ಬಾಬು, ಡಾ.ಶೈಲೇಂದ್ರ ಪ್ರತಾಪ್ ಸಿಂಗ್, ಡಾ.ರಾಧಾ ಗುರುಬಸವರಾಜ್, ಡಾ.ಚೇತನ್, ಡಾ.ಸಿಕಂದರ್, ಡಾ.ಹಾಲಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net