ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಅಗತ್ಯತೆಗೆ ಸ್ಪಂದಿಸುವ ಆಶಯ ಸಂಘದ್ದಾಗಿದೆ

29 ckm 7
ಚಿಕ್ಕಮಗಳೂರು ಹೊರವಲಯದ ಮೂಗ್ತಿಹಳ್ಳಿ ಸರ್ಕಾರಿ ಶಾಲೆ ಮಕ್ಕಳಿಗೆ ಮಹಿಳಾ ಜಗೃತಿ ಸಂಘದಿAದ ಟ್ರಾÈಕ್ ಸೂಟ್ ವಿತರಣೆ ಮಾಡಲಾಯಿತು. ಗೀತಾ ಸುಂದರೇಶ್, ಗೀತಾ ಮೂರ್ತಿ, ನಾಗಮಣಿ, ಶುಭಮಣಿ, ಆನಂದ, ರೇಣುಕಾ ಕುಮಾರ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಮಹಿಳಾ ಜಾಗೃತಿ ಸಂಘದ ವತಿಯಿಂದ ನಗರದ ಹೊರವಲಯದ ಮೂಗ್ತಿಹಳ್ಳಿ ಸರ್ಕಾರಿ ಮಾದರಿ ಹಿರಿಯಪ್ರಾಥಮಿಕ ಶಾಲಾ ಮಕ್ಕಳಿಗೆ ಬುಧವಾರ ಟ್ರಾö್ಯಕ್ ಸೂಟ್ ವಿತರಿಸಲಾಯಿತು.

ಮಹಿಳಾ ಜಾಗೃತಿ ಸಂಘದ ಸಹಕಾರ್ಯದರ್ಶಿ ಗೀತಾ ಸುಂದರೇಶ್ ಈ ಸಂದರ್ಭದಲ್ಲಿ ಮಾತನಾಡಿ, ಸಮವಸ್ತç ಮತ್ತು ಟ್ರಾö್ಯಕ್‌ಸೂಟ್‌ಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು ಮತ್ತು ಸಮಾನತೆಯನ್ನು ತರಲು ಸಹಕಾರಿ. ಟ್ರಾö್ಯಕ್‌ಸೂಟ್ ಮಕ್ಕಳು ಕವಾಯಿತ್ ಮಾಡಲು, ಕ್ರೀಡಾ ಚಟುವಟಿಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲಕರ ಎಂದರು.

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಅಗತ್ಯತೆಗೆ ಸ್ಪಂದಿಸುವ ಆಶಯ ಸಂಘದ್ದಾಗಿದೆ. ಮೂಗ್ತಿಹಳ್ಳಿ ಶಾಲೆಯಿಂದ ಟ್ರಾö್ಯಕ್ ಸೂಟ್ ಬೇಡಿಕೆ ಬಂದಿದ್ದು ಶಾಲೆಯ ೨೨ಮಕ್ಕಳಿಗೆ ೧೧ ಸಾವಿರ ರೂ.ವೆಚ್ಚದಲ್ಲಿ ಪೂರೈಸಲಾಗಿದೆ. ತಮ್ಮೊಂದಿಗೆ ಕಾರ್ಯದರ್ಶಿ ಕಾತ್ಯಾಯಿನಿ ಚಂದ್ರಶೇಖರ್ ನೇತೃತ್ವದಲ್ಲಿ ರೇಣುಕಾಕುಮಾರ್, ಗೀತಾಮೂರ್ತಿ, ಭಾರತಿ ಶಿವರುದ್ರಪ್ಪ ಮತ್ತು ರೇಣುಕಾ ಪ್ರಸನ್ನ ಕೈಜೋಡಿಸಿದ್ದಾರೆ ಎಂದು ಹೇಳಿದರು.

ನಿರ್ದೇಶಕಿ ಗೀತಾ ಮೂರ್ತಿ ಮಾತನಾಡಿ, ೧೯೮೩ರಲ್ಲಿ ಗೌರಮ್ಮ ಬಸವೇಗೌಡರ ನೇತೃತ್ವದಲ್ಲಿ ಆರಂಭಗೊAಡ ಸಂಘ ನಿರಂತರವಾಗಿ ಕಾರ್ಯ ಚಟುವಟಿಕಗಳನ್ನು ನಡೆಸಿಕೊಂಡು ಬಂದಿದೆ. ಮಹಿಳೆಯರಲ್ಲಿರುವ ಸುಪ್ತ ಪ್ರತಿಭೆಗೆ ವೇದಿಕೆ ನಿರ್ಮಿಸುತ್ತಿದೆ. ಇದರ ಜೊತೆಗೆ ಒಂದಷ್ಟು ಸೇವಾಕಾರ್ಯವನ್ನು ಮಾಡಬೇಕು ಎಂಬುದು ಹಿರಿಯರ ಅಪೇಕ್ಷೆ. ಪ್ರತಿವರ್ಷ ಕನಿಷ್ಟು ನಾಲ್ಕು ಸೇವಾ ಯೋಜನೆಗಳನ್ನು ಹಮ್ಮಿಕೊಂಡು ಸಮಾಜಕ್ಕೆ ಅಲ್ಪ ಕಾಣಿಕೆಯನ್ನು ಸಲ್ಲಿಸಲಾಗುತ್ತಿದೆ ಎಂದರು.

ಕೊಡುಗೆ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದ ಶಾಲಾ ಮುಖ್ಯಶಿಕ್ಷಕಿ ಶುಭಮಣಿ, ಗ್ರಾಮೀಣ ರೈತಾಪಿ ವರ್ಗದ ಮಕ್ಕಳು ಕಲಿಯುತ್ತಿರುವ ಸರ್ಕಾರಿ ಶಾಲೆಯನ್ನು ಆಯ್ಕೆಮಾಡಿಕೊಂಡು ಅವಶ್ಯಕತೆ ಅರಿತು ನೆರವು ನೀಡುವ ಮಹಿಳಾಜಾಗೃತಿ ಸಂಘದ ಕಾರ್ಯ ಸಮಾಜಕ್ಕೆ ಮಾದರಿ ಎಂದರು.

ಶಿಕ್ಷಕರಾದ ನಾಗಮಣಿ ಮತ್ತು ಆನಂದ, ಸಂಘದ ಸದಸ್ಯೆ ರೇಣುಕಾ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net