ಗ್ರಾಮೀಣ ಪ್ರದೇಶದ ಮಕ್ಕಳಿಗೆ ನವೋದಯದಲ್ಲಿ ಅವಕಾಶ

kdr navodya
ಕಡೂರು ಬಿಆರ್‌ಸಿ ಕಚೇರಿಯಲ್ಲಿ ನವೋದಯ ವಿದ್ಯಾಲಯದ ಮುಂದಿನ ಶೈಕ್ಷಣಿಕ ಪ್ರವೇಶಕ್ಕೆ ಉಪನ್ಯಾಸಕ ಎ.ರವಿ ಮಾಹಿತಿ ನೀಡಿದರು. ಪ್ರೇಮಕುಮಾರ್, ಶಿಕ್ಷಕರು ಇದ್ದರು.
Published on

ಕಡೂರು: ನವೋದಯ ವಿದ್ಯಾಲಯಗಳು ಪ್ರತಿಭಾವಂತ ಮತ್ತು ಗ್ರಾಮೀಣ ಪ್ರದೇಶದ ಹಿಂದುಳಿದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಶಿಕ್ಷಣ ನೀಡುತ್ತಿದೆ ಎಂದು ಬಾಳೆಹೊನ್ನೂರು ಸಮೀಪದ ಸಿಗೋಡಿನ ಜವಾಹರ್ ನವೋದಯ ವಿದ್ಯಾಲಯ ಉಪನ್ಯಾಸಕ ಎ.ರವಿ ತಿಳಿಸಿದರು.

ಕಡೂರು ಶೈಕ್ಷಣಿಕ ವಲಯದ ಬಿಆರ್‌ಸಿ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ 2026-27ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕಾಗಿ ಆಯ್ಕೆ ಪರೀಕ್ಷೆ ಕುರಿತು ಕಡೂರು-ಬೀರೂರು ಶೈಕ್ಷಣಿಕ ವಲಯಗಳ ಶಿಕ್ಷಕರಿಗೆ ಮಾಹಿತಿ ನೀಡಿ ಮಾತನಾಡಿ, ನವೋದಯ ಶಾಲೆಗಳು ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು, ನಗರ ಪ್ರದೇಶದ ವಿದ್ಯಾರ್ಥಿಗಳೊಂದಿಗೆ ಸಮಾನವಾಗಿ ರ್ಸ್ಪಸಲು ಹೆಚ್ಚಿನ ಪ್ರೋತ್ಸಾಹ ನೀಡುವುದು ಮುಖ್ಯ ಗುರಿಯಾಗಿದೆ ಎಂದರು.

ಸಿಗೋಡು ಜವಾಹರ್ ನವೋದಯ ವಿದ್ಯಾಲಯ 2026-27ನೇ ಸಾಲಿನ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸುತ್ತಿದ್ದು, ಜು.29ರಂದು ಕಡೆಯ ದಿನವಾಗಿದೆ. ಈಗಾಗಲೇ 5ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳು 6ನೇ ತರಗತಿ ನವೋದಯ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಪ್ರವೇಶ ಪರೀಕ್ಷೆ ಬರೆಯಬೇಕೆಂದು ಮಾಹಿತಿ ನೀಡಿದರು.

ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆ ಡಿ.13ರಂದು ನಡೆಯಲಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವವರ ಪಾಲಕರು ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ವಾಸವಾಗಿರಬೇಕು. ಇದೇ ಜಿಲ್ಲೆಯಲ್ಲಿ ಸರ್ಕಾರಿ, ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ 5ನೇ ತರಗತಿ ಓದುತ್ತಿರಬೇಕು. ಅಭ್ಯರ್ಥಿಗಳು 2014 ಮೇ 1ರಿಂದ 20216 ಜು.31ರ ನಡುವೆ ಜನಿಸಿದವರಾಗಿರಬೇಕು ಎಂಬ ಮಾಹಿತಿ ನೀಡಿದರು.

ನವೋದಯ ವಿದ್ಯಾಲಯದ ಶಿಕ್ಷಕ ಕೆ. ಸದಾನಂದನ್, ಕಡೂರು ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯ ಅಧಿಕಾರಿ ಬಿ.ಟಿ.ಪ್ರೇಮ್‌ಕುಮಾರ್, ತಾಲೂಕು ನೋಡೆಲ್ ಅಧಿಕಾರಿ ಶಿವಕುಮಾರ್, ಬಸವರಾಜು, ಇಸಿಒ, ಬಿಆರ್‌ಪಿ ಮತ್ತು ಸಿಆರ್‌ಪಿ ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net