

ಹಲಗೂರು: ಸಮೀಪದ ಕುರಿ ಫಾರಂ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 38 ವಿದ್ಯಾರ್ಥಿಗಳಿಗೆ ಎಸ್‌ಡಿಎಂಸಿ ಅಧ್ಯಕ್ಷ ಗೋವಿಂದರಾಜ್ ಶಾಲಾ ಬ್ಯಾಗ್ ವಿತರಣೆ ಮಾಡಿದರು.
ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿ ಮಕ್ಕಳಿಗೆ ಶಿಕ್ಷಣ ದೊರಕಬೇಕು. ಅವರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಪ್ರತಿಯೊಬ್ಬ ಮಕ್ಕಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಪಡೆಯಬೇಕು ಎಂಬ ದೃಷ್ಟಿಯಿಂದ ನನ್ನ ಕೈಲಾದ ಮಟ್ಟಿಗೆ ಶಾಲೆಯ ಬ್ಯಾಗುಗಳನ್ನು ನೀಡುತ್ತಿದ್ದೇನೆ ಎಂದು ಅವರು ಹೇಳಿದರು.
ಮುಖ್ಯ ಶಿಕ್ಷಕ ಎಸ್. ವಿಶ್ವನಾಥ್ ಮಾತನಾಡಿ, ಶಾಲೆಯ ಎಸ್‌ಡಿ ಎಂಸಿ ಅಧ್ಯಕ್ಷರಾಗಿರುವ ಗೋವಿಂದರಾಜ ಅವರಿಗೆ ವ್ಯಾಸಂಗದ ಮಹತ್ವದ ಅರಿವುವಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ದೊರಕದಿದ್ದರೆ ಅದರ ಪರಿಣಾಮದ ಬಗ್ಗೆಯೂ ತಿಳಿದಿದ್ದಾರೆ. ಅವರು ಪಟ್ಟಣ ಪ್ರದೇಶದಲ್ಲಿ ವ್ಯಾಪಾರ ನಡೆಸುತ್ತಿದ್ದರೂ ತಮ್ಮ ಮಗುವಿಗೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಕೊಡಿಸುತ್ತಿದ್ದಾರೆ ಎಂದರು. ಶಿಕ್ಷಕರಾದ ಸೋಮಶೇಖರ್, ಮಹಸೇವಸ್ವಾಮಿ ಇತರರು ಇದ್ದರು.