ಗ್ರಾಮೀಣ ಜನರಿಗೂ ಸೌಲಭ್ಯ ದೊರಕಲಿ

WhatsApp Image 2022-11-27 at 2.45.24 PM (1)
ಪಿರಿಯಾಪಟ್ಟಣ ತಾಲೂಕು ಕೊತ್ತವಳ್ಳಿ ಗ್ರಾಮದಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಶಾಸಕ ಕೆ.ಮಹದೇವ್ ಗುದ್ದಲಿ ಪೂಜೆ ನೆರವೇರಿಸಿದರು.
Published on

ರಾವಂದೂರು: ನಗರ ಪ್ರದೇಶದ ಜನಗಳಿಗೆ ಸಿಗುವಂತಹ ಸೌಲಭ್ಯಗಳು ಗ್ರಾಮೀಣ ಜನರಿಗೂ ಎಲ್ಲ ಸೌಲಭ್ಯಗಳು ದೊರಕುವಂತಾಗಬೇಕು ಎಂದು ಶಾಸಕ ಕೆ.ಮಹದೇವ್ ಅಭಿಪ್ರಾಯಪಟ್ಟರು.

ಪಿರಿಯಾಪಟ್ಟಣ ತಾಲೂಕು ಕೊತ್ತವಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಸಿ.ಸಿ ರಸ್ತೆ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಮಾತನಾಡಿ ನನ್ನ ಅಧಿಕಾರಾವಧಿಯಲ್ಲಿ ಜಾತಿ, ಪಕ್ಷ ಭೇದ ಮರೆತು ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ನನ್ನ ಅಭಿವೃದ್ಧಿ ಕೆಲಸ ನೋಡಿ ನನಗೆ ಕೂಲಿಯಾಗಿ ಮುಂಬರುವ ಚುನಾವಣೆಯಲ್ಲಿ ಮತ ನೀಡಬೇಕು. ಮತದಾರರು ಯಾವುದೇ ಆಮಿಷಕ್ಕೂ ಒಳಗಾಗದೇ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವವರನ್ನು ಬೆಂಬಲಿಸಬೇಕು ಎಂದರು.

ಕೊತ್ತವಳ್ಳಿ ಗ್ರಾಮದ ಮೆಡಿಕಲ್ ಅನಂತು, ಕೊತ್ತವಳ್ಳಿ ಕೊಪ್ಪಲು ಗ್ರಾಮದ ಹಲವು ಯುವಕರು ಇದೇ ವೇಳೆ ಜೆಡಿಎಸ್‌ಗೆ ಸೇರ್ಪಡೆ ಯಾದರು. ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಕಾರ್ಯಾಧ್ಯಕ್ಷ ಆರ್.ಎಲ್.ಮಣಿ, ಮಾಜಿ ತಾಪಂ ಸದಸ್ಯರಾದ ರಂಗಸ್ವಾಮಿ, ಮಲ್ಲಿಕಾರ್ಜುನ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಪ್ರಭು, ಬಸವಣ್ಣ, ರೈತಮುಖಂಡ ದೇವರಾಜ್, ಮುಖಂಡರಾದ ಸಿರಿ ಯಾಳ್‌ಶೆಟ್ಟಿ, ಮೆಡಿಕಲ್ ಮಂಜು, ತಮ್ಮೇಗೌಡ, ಮಹದೇವ, ಎಇಇ ಮಲ್ಲಿಕಾರ್ಜುನ್, ಇಂಜಿನಿಯರ್ ಚೈತ್ರಶ್ರೀ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net