ಗ್ರಾಮೀಣ ಗ್ರಂಥಾಲಯಗಳಲ್ಲಿ ವೃತ್ತಿ ಮಾರ್ಗದರ್ಶನಕ್ಕೆ ವ್ಯವಸ್ಥೆ

CTD 17 LIB--005
Published on

ಚಿತ್ರದುರ್ಗ: ಗ್ರಂಥಾಲಯಗಳು ಕಲಿಕೆಗೆ ಸಹಕಾರಿ ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಹೇಳಿದರು. ಇಂಡಿಯಾ ಲಿಟರಸಿ ಪ್ರಾಜೆಕ್ಟ್- ಡೆಲ್‌ಟೆಕ್ನಾಲಜಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಸಹಭಾಗಿತ್ವದಲ್ಲಿ, ಗ್ರಾಮೀಣ ವಿದ್ಯಾರ್ಥಿಗಳು,ಯುವಜನರಿಗೆ ವೃತ್ತಿ ಮಾರ್ಗ ದ ರ್ಶನದೆಡೆ ಅರಿವು ಮೂಡಿಸುವ ಸಲುವಾಗಿ, ಜಿಪಂದಲ್ಲಿ ಬುಧವಾರ ಗ್ರಾಮೀಣ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿ ಚಾರಕರಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ಸಮಯದಲ್ಲಿ ಶಾಲಾ-ಕಾಲೇಜುಗಳು ಮುಚ್ಚಿದ್ದವು.ಆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಕಲಿಕಾ ಅಂತರ ಅನುಭ ವಿಸಿದ್ದರು. ಉನ್ನತ ಹಾಗೂ ವೃತ್ತಿ ಶಿಕ್ಷಣ ಪಡೆಯುತ್ತಿರುವ ಯುವ ವಿದ್ಯಾರ್ಥಿಗಳು ವೃತ್ತಿ ಮಾರ್ಗದರ್ಶನ ಕೊರತೆ ಎದುರಿಸಿದ್ದರು. ಆಗ ಶೈಕ್ಷಣಿಕ ಸಂಪನ್ಮೂಲಗಳ ಬಳಕೆಗೆ ಅವಕಾಶ ಮಾಡಿಕೊಡುವ ಮೂಲಕ ಗ್ರಾಮೀಣ ಗ್ರಂಥಾಲಯಗಳನ್ನು ಕಲಿಕಾ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿತ್ತು.
ವೃತ್ತಿ ಮಾರ್ಗದರ್ಶನ ಹಾಗೂ ಉನ್ನತ ವ್ಯಾಸಂಗದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವ ಸಲುವಾಗಿ ಸೂಕ್ತ ವ್ಯವಸ್ಥೆಯನ್ನು ಗ್ರಾಮೀಣ ಗ್ರಂಥಾಲಯಗಳಲ್ಲಿ ಒದಗಿಸಲಾಗಿದೆ. ವಿವಿಧ ವೃತ್ತಿಗಳ ಕುರಿತಂತೆ ಯುವಜನರಲ್ಲಿ ಅರಿವು ಮೂಡಿಸಬೇಕಿದೆ. ಗ್ರಂಥಾಲಯಗಳ ಓದು ಗರ ಸಂಖ್ಯೆ ಹೆಚ್ಚಿಸುವ ಹೊಣೆ ಗ್ರಂಥಪಾಲಕರ ಮೇಲಿದೆ ಎಂದರು. ಕೆರಿಯರ್ ಪ್ಲಾನರ್ ಕನ್ನಡ ಆವೃತ್ತಿ ಪುಸ್ತಕವನ್ನು ಸಿಇಒ ಬಿಡುಗಡೆ ಗೊಳಿಸಿದರು.
ಜಿಪಂ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಮುಖ್ಯಗ್ರಂಥಾಲಯ ಅಧಿಕಾರಿಗಳಾದ ಪಿ.ಆರ್.ತಿಪ್ಪೇಸ್ವಾಮಿ,ಸುಮಾಕೋಡಿಹಳ್ಳಿ, ಇಂ ಡಿಯಾ ಲಿಟರಸಿ ಪ್ರಾಜೆಕ್ಟ್ ಮ್ಯಾನೇಜರ್ ರೋಹಿಣಿ, ತಾಂತ್ರಿಕ ಸಂಯೋಜಕ ಅವಿನಾಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net