ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ

bhr sports
ಕರ್ಕೇಶ್ವರ ಗ್ರಾಮದಲ್ಲಿ ಆಯೋಜಿಸಿದ್ದ ದಸರಾ ಕ್ರೀಡಾಕೂಟದಲ್ಲಿ ನಾಗರಾಜ್ ಮಾತನಾಡಿದರು. ರಾಜೇಶ್ ಕೇಶವತ್ತಿ, ಪ್ರಕಾಶ್, ದಿನಕರ್, ಅಚ್ಚುತ, ವೀರಮಣಿ ಇತರರಿದ್ದರು.
Published on

ಬಾಳೆಹೊನ್ನೂರು: ಯುವಜನರು ಸತತವಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಸ್ಥಿರತೆ ಹಾಗೂ ಸದೃಢವಾಗಲು ಸಾಧ್ಯ ಎಂದು ಕರ್ಕೇಶ್ವರ ಗ್ರಾಪಂ ಅಧ್ಯಕ್ಷ ರಾಜೇಶ್ ಕೇಶವತ್ತಿ ಹೇಳಿದರು.

ಕರ್ಕೇಶ್ವರ ಗ್ರಾಮದಲ್ಲಿ ಗೆಳೆಯರ ಬಳಗ ಕರ್ಕೇಶ್ವರ ಕೈಮರದ ಸೇವಾ ಸಮಿತಿ ನವರಾತ್ರಿ ಉತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದ ಜನರು ಸದಾ ಕೆಲಸದಲ್ಲಿ ತಲ್ಲೀನರಾಗಿರುತ್ತಾರೆ. ಅವರಿಗೆ ದುಡಿಮೆಯೇ ಮುಖ್ಯವಾಗಿರುತ್ತದೆ. ಇಂಥ ಸಂದರ್ಭದಲ್ಲಿ ಹಬ್ಬಗಳಲ್ಲಿ ಗ್ರಾಮೀಣ ಜನರನ್ನು ಒಂದುಗೂಡಿಸಿ ಒಗ್ಗಟ್ಟಿನ ಕಾರ್ಯಕ್ರಮಗಳನ್ನು ಮಾಡುವುದರಿಂದ ಅವರ ಮನಸ್ಸು ಉಲ್ಲಸಿತವಾಗುತ್ತದೆ ಎಂದರು.

ಗೆಳೆಯರ ಬಳಗ ಕರ್ಕೇಶ್ವರ ಕೈಮರದ ಸೇವಾ ಸಮಿತಿ ಅಧ್ಯಕ್ಷ ನಾಗರಾಜ್ ಮಾತನಾಡಿ, ಕರ್ಕೇಶ್ವರ ಗ್ರಾಮಸ್ಥರು ಒಗ್ಗೂಡಿ ಸ್ನೇಹ, ಸೌಹಾರ್ದದಿಂದ ದಸರಾ ಕ್ರೀಡಾಕೂಟ ಆಯೋಜಿಸುತ್ತಿರುವುದು ಸಂತಸದ ವಿಚಾರ. ಗ್ರಾಮಸ್ಥರು ಸದಾ ಸ್ನೇಹ, ಪ್ರೀತಿ, ವಿಶ್ವಾಸದಿಂದ ಬಾಳಬೇಕಿದೆ ಎಂದರು.

ಸಮಿತಿ ಕಾರ್ಯದರ್ಶಿ ಎಸ್.ಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷ ದಿನಕರ್, ಸದಸ್ಯ ಅಚ್ಚುತ, ದೈಹಿಕ ಶಿಕ್ಷಕ ಸುಬ್ಬಯ್ಯ, ವೀರಮಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net