

ಕಕ್ಕೇರಿ: ಗ್ರಾಮೀಣ ಕ್ರೀಡೆಗಳು ಉಳಿಯಬೇಕಾದರೆ ಪ್ರೋತ್ಸಾಹ ಅವಶ್ಯ ಎಂದು ಗ್ರಾಪಂ ಮಾಜಿ ಅಧ್ಯ ಭೀಮಪ್ಪ ಅಂಬೋಜಿ ಹೇಳಿದರು.
ಗ್ರಾಮದಲ್ಲಿ ಗಣೇಶ ಚತುರ್ಥಿ ಹಬ್ಬದ ನಿಮಿತ್ತ ಜೈ ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಸೋಮವಾರ ಏರ್ಪಡಿಸಿದ್ದ ಚಕ್ಕಡಿ ಜಗ್ಗುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಕೆಎಂಎ್ ಜಿಲ್ಲಾ ನಿರ್ದೇಶಕ ಬೆಳಗಾವಿ ಪ್ರಕಾಶ ಅಂಬೋಜಿ ಮಾತನಾಡಿ, ಖಾನಾಪುರ ತಾಲೂಕಿನಲ್ಲಿ ಪೆಲ್ವಾನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕುಸ್ತಿ ಉಳಿಸಿ, ಬೆಳೆಸಿಕೊಂಡು ಹೋಗಲು ಪ್ರಯತ್ನ ಮಾಡಲಾಗುತ್ತಿದೆ ಎಂದರು. ನಾಗಪ್ಪ ಅಂಬೋಜಿ, ಕಾರ್ತಿಕ ಅಂಬೋಜಿ, ಪರಶುರಾಮ ಬಿರ್ಜೆ, ಸಂಗಪ್ಪ ಮಾಟೋಳ್ಳಿ, ಸುರೇಶ ಬಂಡರಗಾಳಿ, ಸಂತೋಷ ಕುಕಡೊಳ್ಳಿ, ರಮೇಶ ಕೊಚೇರಿ, ಯಲ್ಲಪ್ಪ ಚನ್ನಾಪುರ, ಬಿಷ್ಠಪ್ಪ ಸುಂಬಳಿ, ನಿಸಾರ್ ಬಾಗವಾನ್, ಅಲೆಗ್ಸಾಂಡರ್ ಡಿಸಿಲ್ವಾ, ರಮೇಶ ವೀರಾಪುರ, ರಾಜು ಗುಂಜಿಕರ, ಮಂಜುನಾಥ ಅಂಬಡಗಟ್ಟಿ, ನಾಗಪ್ಪ ಅಂಬಡಗಟ್ಟಿ ಇತರರಿದ್ದರು.
ಬೆಕ್ಕಿನಕೆರೆಯ ನಾಗನಾಥ ಪ್ರಸನ್ನ ಪ್ರಥಮ ಬಹುಮಾನ, ಬಡಾಲ ಅಂಕಲಗಿಯ ಜೈ ಆಂಜನೇಯ ಪ್ರಸನ್ನ ದ್ವೀತಿಯ, ದೇವಲಾಪುರದ ಮಲ್ಲೇಶ ನಾಯ್ಕರ ತೃತೀಯ ಬಹುಮಾನ ಪಡೆದರು. ವೀರೇಶ ಯಾದವಾಡ ಚತುರ್ಥ ಬಹುಮಾನ, ಮುತ್ತಲಮರಿ ಗ್ರಾಮದ ಲ್ಮದೇವಿ ಪ್ರಸನ್ನ ಐದನೆಯ ಬಹುಮಾನ ಪಡೆದರು.