

ಕೆ.ಎಂ.ದೊಡ್ಡಿ: ಗ್ರಾಮೀಣ ಸಂಸ್ಕೃತಿ ಬಿಂಬಿಸುವ ಕ್ರೀಡೆಗಳನ್ನು ಬೆಂಬಲಿಸೋಣ ಎಂದು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಸದಸ್ಯ ಕದಲೂರು ರವಿ ತಿಳಿಸಿದರು.
ಸಮೀಪದ ಮಠದ ಹೊನ್ನಾಯಕನಹಳ್ಳಿಯಲ್ಲಿ ಸೋಮೇಶ್ವರ ಗಜಾನನ ಗೆಳೆಯರ ಬಳಗ ಚಾರ್ಲಿ ಬಾಯ್ಸ ವತಿಯಿಂದ ಪ್ರಥಮ ವರ್ಷದ ರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ನಾವೆಲ್ಲರೂ ನಮ್ಮ ಸಂಸ್ಕೃತಿ ಪ್ರತೀಕವಾಗಬೇಕು ಎಂದರು.
ನಮ್ಮ ತಾತ-ಮತ್ತಾತರ ಕಾಲದಿಂದ ಉತ್ತಮ ರಾಸುಗಳನ್ನು ಸಾಕುತ್ತ ರೈತರು ಅವುಗಳನ್ನು ಪೋಷಣೆ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಅವರಿಗೆ ಈ ರೀತಿಯ ಸ್ಪರ್ಧೆೆಗಳು ಪ್ರೇರಣೆ ನೀಡುತ್ತವೆ ಎಂದರು.
ಜೋಡೆತ್ತುಗಳ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದವರಿಗೆ 50 ಸಾವಿರ ರೂ. ಬಹುಮಾನ ಪ್ರಾಯೋಜನೆ ನೀಡಿದರು. ಕಾವೇರಿ ನೀರಾವರಿ ನಿಗಮದ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಹಾಗಲಹಳ್ಳಿ ಬಸವರಾಜೇಗೌಡ, ಮುಖಂಡರಾದ ವರ್ತೂರು ಸಂತೋಷ್, ರಘು, ತಿಬ್ಬೇಗೌಡ, ಅಭಿಷೇಕ್ ಗೌಡ , ಪ್ರಜಾ ಪ್ರಿಯ ವೆಂಕಟೇಶ್, ಕೆ.ಸಿ.ರಮೇಶ್, ವಿನೋದ್, ಮುತ್ತುರಾಜ್ ಇತರರು ಇದ್ದರು.
ಬಹುಮಾನ ವಿಜೇತರು:
ಮಾರುತಿ ಆರ್ಯ ತಿಮ್ಮನ ಹೊಸೂರು-ಪ್ರಥಮ ಬಹುಮಾನ, 50 ಸಾವಿರ ರೂ. ನಗದು ಮತ್ತು ಟ್ರೋಫಿ. ಮಾರಿ ಟಿ.ಎಂ.ಹೊಸೂರು-ದ್ವಿತೀಯ ಬಹುಮಾನ 30 ಸಾವಿರ ರೂ. ನಗದು ಮತ್ತು ಟ್ರೋಫಿ. ಚಿಟ್ಟೆ ಒಂಟಿಸಲಗ ಮಳವಳ್ಳಿ-ತೃತೀಯ ಬಹುಮಾನ 20 ಸಾವಿರ ರೂ. ನಗದು,
7ಏಒಆ-2
ಕೆ.ಎಂ.ದೊಡ್ಡಿ ಸಮೀಪದ ಮಠದ ಹೊನ್ನಾಯಕನಹಳ್ಳಿಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆ ವಿಜೇತರಿಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಸದಸ್ಯ ಕದಲೂರು ರವಿ ಬಹುಮಾನ ವಿತರಿಸಿದರು. ಹಾಗಲಹಳ್ಳಿ ಬಸವರಾಜೇಗೌಡ, ವರ್ತೂರು ಸಂತೋಷ್, ರಘು ,ತಿಬ್ಬೇಗೌಡ ಇತರರು ಹಾಜರಿದ್ದರು.