

ರಾಯಬಾಗ: ಗ್ರಾಮೀಣ ಕ್ರೀಡೆಯಾದ ಕುಸ್ತಿಯನ್ನು ಉಳಿಸಿ ಬೆಳೆಸಲು ಎಲ್ಲರೂ ಕೈಜೋಡಿಸಬೇಕೆಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಗ್ರಾಮ ದೇವತೆ ಸುಗಂಧಾದೇವಿ ಜಾತ್ರೆ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಪುರುಷ ಮತ್ತು ಮಹಿಳೆಯರ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಕುಸ್ತಿ ಕಲಿಯಲು ಪ್ರತಿ ಗ್ರಾಮದಲ್ಲಿ ಗರಡಿ ಮನೆ ನಿರ್ಮಿಸಲು ಸರ್ಕಾರದಿಂದ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದರು.
ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನ ೨ ಲಕ್ಷ ರೂ.ನಗದು, ಬೆಳ್ಳಿ ಗದೆಯನ್ನು ಕೊಲ್ಲಾಪುರದ ಭಾರತ ಕೇಸರಿ ಮೌಲಿ ಜಮದಾಡೆ, ದ್ವಿತೀಯ ಬಹುಮಾನ ೧.೫೦ ಲಕ್ಷ ರೂ.ನಗದು, ಬೆಳ್ಳಿ ಗದೆಯನ್ನು ನೇಪಾಳದ ದೇವಾ ಥಾಪಾ ಹಾಗೂ ತೃತೀಯ ಬಹುಮಾನ ೭೫ ಸಾವಿರ ರೂ.ನಗದು, ಬೆಳ್ಳಿ ಗದೆಯನ್ನು ದಾವಣಗೆರೆಯ ಕರ್ನಾಟಕ ಕಂಠೀರವ ಕಾರ್ತಿಕ ಕಾಟೆ ಪಡೆದರು.
ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನ ೫೦ ಸಾವಿರ ರೂ. ನಗದು ಬಹುಮಾನ ಕೊಲ್ಲಾಪುರದ ವರ್ಷಾ ಮಾನೆ ಹಾಗೂ ದ್ವಿತೀಯ ಬಹುಮಾನ ೩೫ ಸಾವಿರ ರೂ.ನಗದು ಬಹುಮಾನ ಕೊಲ್ಲಾಪುರದ ಸಾನಿಕಾ ಸೂರ್ಯವಂಶಿ ಪಡೆದುಕೊಂಡರು.
ಮಹಾವೀರ ಮೋಹಿತೆ, ಡಾ.ಎನ್.ಎ.ಮಗದುಮ್ಮ, ಅಪ್ಪಾಸಾಹೇಬ ಕುಲಗುಡೆ, ಸಿದ್ಧಾರೂಢ ಬಂಡಗರ, ದಿಲೀಪ ಜಮಾದಾರ, ಅಣ್ಣಪ್ಪ ಭೋವಿ, ರಾಕೇಶ ಕಾಂಬಳೆ, ತಮ್ಮಾಣಿ ನಿಂಗನೂರೆ, ದಶರಥ ಕಾಟೆ, ಅರ್ಜುನ ನಾಯವಾಡಿ, ರಾಜು ಕೊಟಗಿ, ಶಂಕರಗೌಡ ಪಾಟೀಲ, ನಿರ್ಮಲ ಪಾಟೀಲ, ಜ್ಯೋತಿ ಕೆಂಪಟ್ಟಿ, ಲಕ್ಕಪ್ಪ ಪೂಜಾರಿ ಇತರರಿದ್ದರು.