

ಮುರಗೋಡ, ಬೆಳಗಾವಿ: ಜನರ ಒಗ್ಗಟ್ಟು, ಸಹಕಾರದಿಂದ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಕಾಡಾ ಅಧ್ಯಕ್ಷ ವಿ.ಐ.ಪಾಟೀಲ ಹೇಳಿದರು.
ಸಮೀಪದ ಚಳಕೂಪ್ಪ ಗ್ರಾಮದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಒಳ್ಳೆಯ ಕಾರ್ಯಕ್ಕೆ ನಿಷ್ಟೆಯಿಂದ ಶ್ರಮಿಸಬೇಕು. ಧಾರ್ಮಿಕ ಕಾರ್ಯಗಳಿಗೆ ಗ್ರಾಮದ ಎಲ್ಲರೂ ಕೈಜೋಡಿಸಿದರೆ ಕಾರ್ಯ ಯಶಸ್ವಿಯಾಗುತ್ತದೆ. ಗ್ರಾಮದ ಅಭಿವೃದ್ಧಿಗೆ ಎಲ್ಲ ಸಹಕಾರ ನೀಡುವುದಾಗಿ ಹೇಳಿದರು.
ಸಾನಿಧ್ಯವಹಿಸಿ ನೀಲಕಂಠ ಸ್ವಾಮೀಜಿ ಮಾತನಾಡಿ, ಒಳ್ಳೆಯ ಸಂಸ್ಕಾರ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಗ್ರಾಮಸ್ಥರಿಂದ ವಿ.ಐ.ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಕಪರಟ್ಟಿ ನಿಂಗಪ್ಪ ಮಹಾರಾಜರು, ಬೈಲವಾಡ ಪೂಜ್ಯರು, ಮುಖ್ಯ ಶಿಕ್ಷಕ ಶ್ರೀಕಾಂತ ಪಟಾತರ, ಮಲ್ಲನಗೌಡ ಗೌಡತಿ, ಅದೃಶ್ಯ ಶೀಗೆಹಳ್ಳಿ, ಜಗದೀಶ ಕಾಡೇಶನವರ, ಶಿವಲಿಂಗದ ಕಿತ್ತೂರ, ಪುಂಡಲೀಕ ನಾಗನೂರ, ಸೋಮಲಿಂಗ ಬಡಲಿ, ಶ್ರೀಕಾಂತ ಕೌಜಲಗಿ, ಮಲ್ಲಪ್ಪ ಡಮ್ಮಣಗಿ, ದೇಮಣ್ಣ ನಾಗನೂರು, ಚಂದ್ರು ಖಿಲಾರಿ, ಮಡಿವಾಳೆಪ್ಪ ಡಮ್ಮಣಗಿ, ಸಿದ್ಧಪ್ಪ ನಾಗನೂರ ಇತರರಿದ್ದರು.