ಗ್ರಾಮಸ್ಥರಿಂದ ಅಧಿಕಾರಿಗಳ ತರಾಟೆ

2Sambaragi3
Published on

ಸಂಬರಗಿ: ಸಮೀಪದ ಹಲ್ಯಾಳ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಕಾಮಗಾರಿ ವಿಳಂಬ ಹಾಗೂ ಕಳಪೆ ಕಾಮಗಾರಿ ಪರಿಶೀಲನೆಗಾಗಿ ಶನಿವಾರ ಗ್ರಾಮಕ್ಕೆ ಆಗಮಿಸಿದ ಚಿಕ್ಕೋಡಿ ವಿಭಾಗದ ಕುಡಿಯುವ ನೀರಿನ ಯೋಜನೆಯ ಮುಖ್ಯ ಅಭಿಯಂತ ರಾಮಚಂದ್ರರಾವ್ ಹಾಗೂ ಅಥಣಿ ವಲಯದ ಕುಡಿಯುವ ನೀರು ಯೋಜನೆ ಅಧಿಕಾರಿ ರವೀಂದ್ರ ಮೂರಗಾಲಿ ಅವರ ವಾಹನಕ್ಕೆ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ದಲಿತ ಮುಖಂಡ ಗೌತಮ ಬನಸೋಡೆ ಮಾತನಾಡಿ, ಹಲ್ಯಾಳ ಗ್ರಾಮಕ್ಕೆ ೧.೬೦ ಕೋಟಿ ರೂ.ಗಳಲ್ಲಿ ಜಲ ಜೀವನ ಕಾಮಗಾರಿ ಮಾಡಲಾಗುತ್ತಿದೆ. ಆದರೆ, ದಲಿತರ ಓಣಿಯಲ್ಲಿ ಸರಿಯಾಗಿ ಕಾಮಗಾರಿ ಕೈಗೊಂಡಿಲ್ಲ. ರಸ್ತೆ ಮೇಲೆ ತಗ್ಗು-ಗುಂಡಿ ಬಿದ್ದಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಬಳಿಕ ಅಧಿಕಾರಿ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯೆ ಪ್ರವೇಶಿಸಿ ಅದನ್ನು ತಿಳಿಗೊಸಿದರು.

ನಂತರ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

ಸಂತೋಷ ಕಾಂಬಳೆ, ಮುದಕಣ್ಣ ಶೇಗುಣಸಿ, ಸಚಿನ ಕಾಂಬಳೆ, ರಾಕೇಶ ಶಿಂಗೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net