ಗ್ರಾಮಸ್ಥರಲ್ಲಿ ಸಂಭ್ರಮ

20 ckm 5
Published on

ಚಿಕ್ಕಮಗಳೂರು: ದಶಕಗಳ ನಂತರ ಕೋಡಿ ಬಿದ್ದ ಬೆಳವಾಡಿ ಕೆರೆಯಲ್ಲಿ ಗ್ರಾಮಸ್ಥುರು ಬಲೆ ಬೀಸಿ ಮೀನು ಹಿಡಿದರು. ಮಕ್ಕಳು ಈಜಿ ಸಂಭ್ರಮಿಸಿದರು. 10 ವರ್ಷಗಳಿಂದ ಕೆರೆ ತುಂಬದೆ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದರು. ಬುಧವಾರ ರಸ್ತೆ ಮೇಲೆ ಹರಿಯುತ್ತಿದ್ದ ಕೆರೆ ನೀರಿನಲ್ಲಿ ಮಹಿಳೆಯರು ಬಟ್ಟೆ ತೊಳೆಯುತ್ತಿದ್ದರೆ ಯುವಕರು, ಗ್ರಾಮಸ್ಥರು ಮೀನು ಹಿಡಿದರು. ಕೆಲವರು ಮಕ್ಕಳಿಗೆ ಕೆರೆ ಬದಿಯಲ್ಲಿ ಈಜು ಕಲಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net