

ಶಹಾಪುರ:ಅಲ್ಪ-ಸ್ವಲ್ಪ ಜಾಗಕ್ಕೆ ಮನಸ್ಸುಗಳೆ ಒಡೆದು ಹೋಗುವ ಈ ಕಾಲದಲ್ಲಿ ಆಸ್ಪತ್ರೆಗಾಗಿ ಎರಡು ಎಕರೆ ಭೂಮಿಯನ್ನೆ ದಾನ ನೀಡಿದವರು ನಮ್ಮ ನಡುವೆ ಇನ್ನೂ ಇದ್ದಾರೆಂಬುವುದಕ್ಕೆ ಸಗರ ಗ್ರಾಮದ ಗ್ರಾಪಂ ಸದಸ್ಯ ತಿರುಪತಿ ಹತ್ತಿಕುಣಿ ಅವರೇ ಪ್ರತ್ಯೇಕ ಸಾಕ್ಷಿಯಾಗಿದ್ದಾರೆ.
ಸಗರ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕೆ ಜಾಗದ ಕೊರತೆ ಇತ್ತು. ಇದನ್ನು ಮನÀಗಂಡ ತಿರುಪತಿ, ತಮ್ಮ ತಂದೆ ಸ್ವಾತಂತ್ರÈ ಹೋರಾಟಗಾರರಾಗಿದ್ದ ದಿ.ಶಿವಲಿಂಗಪ್ಪ ಹತ್ತಿಕುಣಿ ಅವರ ಸ್ಮರಣಾರ್ಥವಾಗಿ ಎರಡು ಎಕರೆ ಭೂಮಿಯನ್ನು ದಾನ ಮಾಡುವ ಮೂಲಕ ತಮ್ಮೂರಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆಗೆ ಮೂಲ ಕಾರಣರಾಗಿದ್ದಾರೆ.
ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಸ್ವಾತಂತ್ರÈಯೋಧರ ಕುಟುಂಬದಿAದ ಬಂದ ನಾನು, ನನ್ನೂರಲ್ಲಿ ಈ ಸೌಲಭ್ಯಕ್ಕೆ ಜಾಗದ ಕೊರತೆ ಇದೆ ಎಂದು ತಿಳಿದ ತಕ್ಷಣ ಮನೆಯಲ್ಲಿ ಎಲ್ಲರೊಂದಿಗೆ ಚರ್ಚಿಸಿ ಊರ ಜನರಿಗೆ ಒಳಿತಾಗುತ್ತದೆ ಎಂದರೆ ಜಾಗ ನೀಡೋಣ ಎಂಬ ತಿರ್ಮಾನಕ್ಕೆ ಬಂದು ನೀಡಿರುವುದಾಗಿ ಹೇಳಿದರು. ಈ ಜಾಗದಲ್ಲಿ ನಿವೇಶನ ಮಾಡಿದರೆ ಸಾಕಷ್ಟು ಹಣ ಬರುತ್ತದೆ ಎಂಬ ಸಲಹೆ ಕೂಡ ಕೆಲವರಿಂದ ಬಂದಿತ್ತು. ಆದರೆ ನಾವು ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಈ ತಿರ್ಮಾನ ತೆಗೆದುಕೊಂಡಿz್ದೆÃವೆ. ಅದು ಈಗ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಆರೋಗ್ಯ ಇಲಾಖೆ ಅಧಿಕಾರಿಗಳು ಸಕಾರಗೊಳಿಸಿದ್ದಾರೆ ಎಂದು ಸಂತಸ ಹಂಚಿಕೊAಡರು.
ಹಿರಿಯ ಹೆಸರು ಅಮರವಾಗಿ ಉಳಿಯುವುದರ ಜತೆಗೆ ಗ್ರಾಮಸ್ಥರ ಆರೋಗ್ಯ ಕಾಪಾಡಲು ಒಂದು ಆಸ್ಪತ್ರೆ ಬಂತಲ್ಲ ಎಂಬ ಸಂತೋಷ ಇದೆ ಎಂದು ತಾಲೂಕು ಗ್ರಾಮೀಣ ಬಿಜೆಪಿ ಅಧ್ಯಕ್ಷರೂ ಆಗಿರುವ ತಿರುಪತಿ ಹತ್ತಿಕುಣಿ ಹೇಳಿದ್ದಾರೆ.