ಗ್ರಾಮಸಭೆಯಲ್ಲಿ ಜನರ ಕುಂದುಕೊರತೆಗಳ ಚರ್ಚೆ

WhatsApp Image 2023-02-24 at 3.30.17 PM
Published on

ಹುಲ್ಲಹಳ್ಳಿ: ಇಲ್ಲಿನ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ನಡೆದ ಗ್ರಾಮಸಭೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಗ್ರಾಮದ ಕುಂದುಕೊರತೆಗಳ ಬಗ್ಗೆ ಚರ್ಚಿಸಲಾಯಿತು.

ಭಾಗ್ಯ ಜ್ಯೋತಿ ಯೋಜನೆಯ ವಿದ್ಯುತ್ ಸಂಪರ್ಕ ಇರುವ ಬಡಜನರಿಗೆ ಏಕಾಏಕಿ 15,000 ರೂ. ಬಿಲ್ ಪಾವತಿಸಬೇಕು. ಇಲ್ಲವಾದಲ್ಲಿ ಸಂಪರ್ಕ ಕಡಿತಗೊಳಿಸುವುದಾಗಿ ಸೆಸ್ಕ್ ಸಿಬ್ಬಂದಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ಪಿಡಿಒ ಗಮನಕ್ಕೆ ತಂದರು.

ಟೀಚರ್ಸ್ ಕಾಲನಿಯಲ್ಲಿರುವ ಉದ್ಯಾವನ ಅಭಿವೃದ್ಧಿ ಹಾಗೂ ಗ್ರಾಪಂಗೆ ಸೇರಿದ ನಿವೇಶಗಳಿಗೆ ತಂತಿ ಬೇಲಿ, ನಾಮಫಲಕ ಅಳವಡಿಸುವಂತೆ ಜಯ ಕರ್ನಾಟಕ ಸಂಘಟನೆ ಹೋಬಳಿ ಅಧ್ಯಕ್ಷ ಕಾಶಿ ಒತ್ತಾಯಿಸಿದರು. ನರೇಗಾ ಯೋಜನೆಯಡಿ ಗಿಡ ನೆಡುವುದು, ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಹಲವು ಯೋಜನೆಗಳ ಕುರಿತು ಚರ್ಚಿಸಲಾಯಿತು.

ಗ್ರಾಪಂ ಅಧ್ಯಕ್ಷ ಎಚ್.ಎನ್.ಮಹೇಶ್, ಪಿಡಿಒ ಅರುಣ್‌ಕುಮಾರ್, ಪಶು ವೈದ್ಯಾಧಿಕಾರಿ ಡಾ.ನಾಗರಾಜು, ಗ್ರಾಪಂ ಸದಸ್ಯರಾದ ನಾಗೇಂದ್ರ, ಜಯಮ್ಮ, ಲಕ್ಷ್ಮಮ್ಮ, ಭಾಗ್ಯಾ, ಸೋಮಶೇಖರ, ನೌಕರ ಬಸವಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net