ಗ್ರಾಮದೇವಿ ಜಾತ್ರೆ ಜವಾಬ್ದಾರಿ ನಮ್ಮದೆ

2manju4
Published on

ಬೆಳಗಾವಿ: ಮುಂದಿನ ವರ್ಷ ನಡೆಯಲಿರುವ ಮಾವಿನಕಟ್ಟಿ ಗ್ರಾಮದ ಜಾತ್ರೆಯ ಸಂಪೂರ್ಣ ಜವಾಬ್ದಾರಿ ನಾವೇ ವಹಿಸಿಕೊಳ್ಳು ತ್ತೇವೆ. 3 ಕೋಟಿ ರೂ.ವೆಚ್ಚದಲ್ಲಿ ಗ್ರಾಮದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದರು.

ತಾಲೂಕಿನ ಮಾವಿನಕಟ್ಟಿ ಗ್ರಾಮದಲ್ಲಿ ರಥ ನಿರ್ಮಾಣದ (ಚಕ್ರ ಅಳವಡಿಸುವ) ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿದ ಅವರು, 2026ರಲ್ಲಿ ನಡೆಯಲಿರುವ ಜಾತ್ರೆಗೆ ಈಗಿನಿಂದಲೇ ಸಿದ್ಧತೆ ನಡೆಯುತ್ತಿದೆ. ರಥ ಓಡಾಡುವ ಊರ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು. ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಜಾತ್ರಾ ಮಹೋತ್ಸವ ವೇಳೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು.

ಇದಕ್ಕಾಗಿ 10 ಟ್ಯಾಂಕರ್ ನೀಡಲಾಗುವುದು. ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸೋಣ ಎಂದರು. ರುದ್ರಮನಿ ದೇವರು ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ನಮ್ರತಾ ಜಾಧವ, ಶಂಕರಗೌಡ ಪಾಟೀಲ, ನಾಗೇಶ ದೇಸಾಯಿ, ಬಸವಣ್ಣಿ ಮಲ್ಲಣ್ಣವರ, ಬಸನಗೌಡ ಪಾಟೀಲ, ಇಂದ್ರಸಿಂಗ್ ಜಾಧವ, ಸಚಿನ್ ಜಾಧವ, ಕಸ್ತೂರಿ ಮಲ್ಲಣ್ಣವರ, ಕಲ್ಲವ್ವ ಹಿರೇಹೊಳಿ, ಸದಾಶಿವ ತಾನಸಿ ಇತರರಿದ್ದರು. ತಾಲೂಕಿನ ಸುಳೇಭಾವಿ ಗ್ರಾಮದ ಶಾಕಾಂಬರಿ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಪಾರಾಯಣ ಮತ್ತು ದೇವಿಯ ವಿಶೇಷತೆ ಪುರಾಣ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಿದರು. ಬಾಬುರಾವ ಮಹಾರಾಜರು, ದತ್ತಾ ಬಂಡಿಗಣಿ, ಶಂಕರಗೌಡ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net