ಗ್ರಾಮದೇವತೆ ಮೂರ್ತಿ ಮೆರವಣಿಗೆ

h25-chabbi
Published on

ಹುಬ್ಬಳ್ಳಿ: ಮನುಷ್ಯ ಜನ್ಮ ಸಿಗುವುದು ಪುಣ್ಯದಫಲ. ಸಂಸ್ಕಾರಯುತ ಜೀವನ ನಡೆಸಿ, ಸಮಾಜಕ್ಕೆ ಮಾದರಿಯಾಗಬೇಕು ಎಂದು ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಹೇಳಿದರು. ಶ್ರೀ ಗ್ರಾಮದೇವತೆ ಗುಡಿ ಟ್ರಸ್ಟ್ ಕಮಿಟಿ ವತಿಯಿಂದ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಏರ್ಪಡಿಸಿದ್ದ ಗ್ರಾಮದೇವತಾ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಅಣ್ಣಿಗೇರಿ ದಾಸೋಹ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಮದೇವತೆ ದ್ಯಾಮವ್ವ- ದುರ್ಗವ್ವ ದೇವಿ ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net