ಗ್ರಾಮದ ಏಳಿಗೆಗೆ ಯುವಕರ ಪಾತ್ರ ದೊಡ್ಡದು: ಸಿಮೆಂಟ್ ಮಂಜು

ಗ್ರಾಮದ ಏಳಿಗೆಗೆ ಯುವಕರ ಪಾತ್ರ ದೊಡ್ಡದು: ಸಿಮೆಂಟ್ ಮಂಜು
Published on

ಆಲೂರು : ಯುವಕರು ದೇಶದ ದೊಡ್ಡ ಆಸ್ತಿ ಸಮಗ್ರ ಗ್ರಾಮೀಣಾಭಿವೃದ್ಧಿ ವಿಷಯದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ಸಿಮೆಂಟ್ ಮಂಜು ಹೇಳಿದರು.

ಅವರು ತಾಲ್ಲೂಕಿನ ಕಿರಳ್ಳಿ ಗ್ರಾಮದಲ್ಲಿ ಶ್ರೀ ಕರಿಯಮ್ಮ ಯುವಕರ ಸಂಘದ ಉದ್ಘಾಟನೆ ಕಾರ್ಯಕ್ರಮ ನೇರವೇರಿಸಿ ಮಾತನಾಡಿ ಯುವಕರು ಸಮಾಜಕ್ಕೆ ಅಭಿವೃದ್ಧಿಗೆ ಪೂರಕವಾದ ಪರಿವರ್ತನಾ ವಾತಾವರಣ ನಿರ್ಮಿಸಲು ಶ್ರಮಿಸಬೇಕು ಆಗ ಮಾತ್ರ ಗ್ರಾಮಗಳು ಅಭಿವೃದ್ಧಿ ಹೊಂದಲು ಸಾದ್ಯವಾಗುತ್ತದೆ ಇದರ ಜೊತೆಗೆ ಸದೃಢ ರಾಷ್ಟ್ರಕಟ್ಟುವಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ ಅದ್ದರಿಂದ  ಯುವಕರು ಗ್ರಾಮದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು  ಅವುಗಳನ್ನು ಬದಿಗೊತ್ತಿ ಎಲ್ಲರೂ ಒಗ್ಗಟ್ಟಿನಿಂದ  ಸಮಾಜಮುಖಿ ಉತ್ತಮ ಕೆಲಸ ಮಾಡುವುದರ ಜೊತೆಗೆ ಸಂಘದ ಬೆಳವಣಿಗೆಗೆ ಕಟಿಬದ್ದರಾಗಬೇಕು ಮುಂದಿನ ದಿನಗಳಲ್ಲಿ ಕಿರಳ್ಳಿ ಗ್ರಾಮ ಸೇರಿದಂತೆ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಬಿಜೆಪಿ ಪಕ್ಷ  ಹಾಗೂ ನಾನು ಕೂಡ ವೈಯುಕ್ತಿಕವಾಗಿ ಗ್ರಾಮದ ಮುಖಂಡರ ಜೊತೆ ಕೈಜೋಡಿಸಲಾಗುವುದು ಅದೇರೀತಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ನನಗೆ ಅವಕಾಶ ಸಿಗುವ ಬರವಸೆ ಇದೆ ಪಕ್ಷದ ಅಭ್ಯರ್ಥಿ ಗೆಲುವಿಗೆ ನೀವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.


ಬಿಜೆಪಿ ಹಿರಿಯ ಮುಖಂಡ ಎ.ಹೆಚ್.ರಮೇಶ್ ಮಾತನಾಡಿ  ಸದೃಢ ನಾಡು ಮತ್ತು ರಾಷ್ಟ್ರ ಕಟ್ಟುವಲ್ಲಿ ಸ್ವಯಂ ಪ್ರೇರಣೆ ಕಾರ್ಯ ನಿರ್ವಹಿಸಬೇಕಾಗಿದೆ. ಯುವಕರು ತಮ್ಮ ಬದುಕಿನಲ್ಲಿ ಶಿಸ್ತು, ಸಮಯ ಪ್ರಜ್ಞೆ, ಆತ್ಮವಿಶ್ವಾಸ, ದೃಢ ನಂಬಿಕೆ, ಶ್ರದ್ಧಾ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಗ್ರಾಮಾಭಿವೃದ್ದಿಯಾಗಲು ಸಾಧ್ಯವಾಗುತ್ತದೆ ಪ್ರತಿಯೊಬ್ಬ ಯುವಕರು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಸಕರಾತ್ಮಕ ವಾಗಿ ಆಲೋಚನೆ ಮಾಡುವ ಮೂಲಕ ಗ್ರಾಮ ಹಾಗೂ ಸಂಘದ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ಇದರ ಉಪಯೋಗಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕುಎಂದು ಹೇಳಿದರು.


ಕಾರ್ಯಕ್ರಮದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಹುಲ್ಲಳ್ಳಿ ನಾಗರಾಜ್,ರಾಧಮ್ಮ ಜನಸ್ಪಂಧನ ಸಂಸ್ಥೆ ಸಂಸ್ಥಾಪಕ ಹೇಮಂತ್ ಕುಮಾರ್,ಹುಣಸವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮೋಹನ್,ಬೈರಾಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಗಣೇಶ್,ರುದ್ರೇಗೌಡ,ನಂಜುಂಡಪ್ಪ,ಬಿಜೆಪಿ ಹಿರಿಯ ಮುಖಂಡ ಲೋಕೇಶ್ ಕಣಗಾಲ್,ಗ್ರಾಮದ ಮುಖಂಡರಾದ ಸಂಘದ ಅಧ್ಯಕ್ಷ ಧರಣಿ,ಗೌರವ ಅಧ್ಯಕ್ಷ  ಕಿರಣ್,ಉಪಾಧ್ಯಕ್ಷ ಮೋಹನ್,ಕಾರ್ಯದರ್ಶಿ ನಿಂಗೇಗೌಡ ಹಾಗೂ ಉಪಸ್ಥಿತರಿದ್ದರು.


.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net