ಗ್ರಾಮದ ಅಭಿವೃದ್ಧಿಗೆ ಮೊದಲು ಆದ್ಯತೆ: ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ ಪೊಲೀಸ್ ಪಾಟೀಲ್ ಅನಿಸಿಕೆ

ktl
ಕವಿತಾಳ ಸಮೀಪದ ಹೀರಾ ಗ್ರಾಪಂಗೆ ಅಧ್ಯಕ್ಷೆ , ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಪಾರ್ವತಮ್ಮ ಪೊಲೀಸ್ ಪಾಟೀಲ್, ಯಲ್ಲಮ್ಮ ಕಲಂಗೇರ ಅವರನ್ನು ಸದಸ್ಯರು ಗುರುವಾರ ಸನ್ಮಾನಿಸಿದರು. ಸದಸ್ಯರಾದ ಶಾಂತಮ್ಮ ಅಯ್ಯಪ್ಪ, ಚನ್ನಬಸವ ಕಸಂದೊಡ್ಡಿ, ಮಲ್ಲಮ್ಮ ಹನುಮಂತರಾಯಗೌಡ, ಬಸಮ್ಮ ದುರು ಗನಗೌಡ, ಅಂಬಮ್ಮ ರಂಗಪ್ಪ, ಅಮರೇಶ ಹೊಂದ್ಲೆಪ್ಪ ಪಿಡಿಒ ಪ್ರದೀಪಕುಮಾರ ಇದ್ದರು.
Published on

ಕವಿತಾಳ: ಸರ್ಕಾರಿ ಸೌಲಭ್ಯ ಜನರಿಗೆ ತಲುಪಿಸಲು ನಿರಂತರ ಶ್ರಮಿಸುತ್ತೇನೆ ಎಂದು ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ ಪೊಲೀಸ್ ಪಾಟೀಲ್ ಹೇಳಿದರು.


ಹೀರಾ ಗ್ರಾಪಂಯಲ್ಲಿ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿ ಗುರುವಾರ ಮಾತನಾಡಿದರು. ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಪಂಚಾಯಿತಿಗೆ ಬರಬೇಕು. ಸಾರ್ವಜನಿಕರ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಬೇಕು. ಜನಪ್ರತಿನಿಧಿಗಳ ಸಹಕಾರ ಪಡೆದು ಪಂಚಾಯಿತಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.


ಉಪಾಧ್ಯಕ್ಷೆ ಯಲ್ಲಮ್ಮ ಕಲಂಗೇರ, ಪ್ರಮುಖರಾದ ರಾಜ ಆದರ್ಶನಾಯಕ ಮಾನ್ವಿ, ಮಲ್ಲಿಕಾರ್ಜುನ ಹೀರಾ, ಹನುಮಂತ ರಾಯಗೌಡ, ಪ್ರತಾಪಗೌಡ, ವಿಕ್ರಮಗೌಡ, ಮಾಜಿ ತಾಪಂ ಸದಸ್ಯ ಶ್ರೀಧರಗೌಡ, ಸಿದ್ದಪ್ಪ ಸಾಹುಕಾರ, ತಾಪಂ ಮಾಜಿ ಸದಸ್ಯ ಚನ್ನಬಸವ ನಾಯಕ, ನಾಗರಾಜಗೌಡ, ನಾಗೇಶ ಸಿರವಾರ, ಅಂಜಪ್ಪ ಬುಳ್ಳಪೂರ, ಮುದೆಪ್ಪ ದಳಪತಿ, ಧನಂಜಯ್ಯ ಗ್ರಾಪಂ ಮಾಜಿ ಅಧ್ಯಕ್ಷ, ಹನುಮೇಶ ನಾಯಕ, ತಿಮ್ಮಪ್ಪ ಉಪ್ಪಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net