ಗ್ರಾಮದ ಅಭಿವೃದ್ಧಿಗೆ ಮೀಸಲಿಟ್ಟ ಸ್ಥಳ ಮಾಜಿ ಸೈನಿಕರಿಗೆ ಮಂಜೂರು ಮಾಡಿದ್ದಕ್ಕೆ ಗ್ರಾಮಸ್ಥರ ಕಿಡಿ

SOR WEB
Published on

ಸೊರಬ: ತಾಲೂಕಿನ ಉಳವಿ ಹೋಬಳಿ ವ್ಯಾಪ್ತಿಯ ಕುಂಬತ್ತಿ ಗ್ರಾಮದ ಸರ್ವೇ ನಂ. 47ರಲ್ಲಿ 4ಎಕರೆ, ಸರ್ವೆ ನಂ. 48ರಲ್ಲಿ 8ಎಕರೆ ಜಮೀನುನ್ನು ಮಾಜಿ ಸೈನಿಕರಿಗೆ ಮಂಜೂರಾತಿ ಮಾಡಲಾಗಿದ್ದು ಕೂಡಲೆ ಹಕ್ಕುಪತ್ರ ವಜಾಗೊಳಿಸುವಂತೆ ಗ್ರಾಮಸ್ಥರು ತಹಸೀಲ್ದಾರ್‌ಗೆ ಸೋಮವಾರ ಮನವಿ ಸಲ್ಲಿಸಿದರು.

70 ಕುಟುಂಬಗಳು ವಾಸವಾಗಿರುವ ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಬೇರೆ ಜಾಗವಿಲ್ಲ. 12 ಎಕರೆ ಜಮೀನನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಮೀಸಲಿಟ್ಟಿದ್ದು ಅದೇ ಜಾಗವನ್ನು ಮಾಜಿ ಸೈನಿಕರಿಗೆ ಮಂಜೂರಾತಿ ಮಾಡಲಾಗಿದೆ. ಶಾಸಕ ಕುಮಾರ್ ಬಂಗಾರಪ್ಪ ಅವರ ಆಪ್ತ ಸಹಾಯಕ ಉಮೇಶ್ ತಮ್ಮ ಪ್ರಭಾವ ಬಳಸಿ ಭೂಮಿ ಮಂಜೂರಾತಿ ಪಡೆದಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಬಡವರು ಹೆಚ್ಚಾಗಿದ್ದರೂ ಗ್ರಾಮದ ಅಭಿವೃದ್ಧಿಗಾಗಿ ಮೀಸಲಿಟ್ಟ ಜಾಗದಲ್ಲಿ ಸಾಗುವಳಿ ಮಾಡಲು ಬಿಟ್ಟಿಲ್ಲ. ಆದರೆ ರಾಜಕೀಯ ಪ್ರಭಾವ ಬಳಸಿ ಕೆಲವು ಮಾಜಿ ಸೈನಿಕರು ಹಾಗೂ ಶಾಸಕರ ಆಪ್ತ ಸಹಾಯಕರು ಅಕ್ರಮವಾಗಿ ಭೂ ಮಂಜೂರಾತಿ ಪಡೆದಿದ್ದಾರೆ. ಈ ಬಗ್ಗೆ ಗ್ರಾಮಸ್ಥರಿಂದ ತಕರಾರು ಅರ್ಜಿ ಸಲ್ಲಿಸಲಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net