ಗ್ರಾಮಗಳು ಸುಧಾರಣೆಯಾದರೆ ದೇಶ ಅಭಿವೃದ್ಧಿ

tnp news02.30
Published on

ತಿ.ನರಸೀಪುರ: ತಾಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ಎನ್‌ಆರ್‌ಐಜಿ ಯೋಜನೆಯಡಿ 35.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಗ್ರಾ.ಪಂ. ಅಧ್ಯಕ್ಷೆ ಆರ್.ನಾಗಮಣಿ ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಡಿಪಿ ಸದಸ್ಯ ಸುನೀಲ್ ಬೋಸ್ ಮಾತನಾಡಿ, ಗ್ರಾಮಗಳು ಸುಧಾರಣೆ ಆದರೆ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ ಎಂದು ನುಡಿದ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಕಂಡ ಕನಸು ನನಸಾಗಬೇಕಾದರೆ ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಜನರಿಗೆ ತಲುಪಿಸಬೇಕು. ಗ್ರಾಮಗಳ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜನರು ಗ್ರಾಮ ಪಂಚಾಯಿತಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಹಾಗಾದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಲು ಸಾಧ್ಯವಾಗುತ್ತದೆ. ಅಭಿವೃದ್ಧಿ ವಿಷಯಯದಲ್ಲಿ ರಾಜಕೀಯವನ್ನು ಬೆರೆಸದೆ ಪಕ್ಷಾತೀತವಾಗಿ ಜನತೆಯ ಕೆಲಸಗಳನ್ನು ಮಾಡಬೇಕು. ಗ್ರಾಮಗಳ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆಗೊಳಿಸಿದ್ದು, ಅವುಗಳ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.


ಗ್ರಾ.ಪಂ. ಉಪಾಧ್ಯಕ್ಷೆ ವನಜಾಕ್ಷಿ, ಮಾಜಿ ಅಧ್ಯಕ್ಷ ಲಕ್ಷ್ಮಣ, ಮರಿಸ್ವಾಮಿ, ಮಾಜಿ ಉಪಾಧ್ಯಕ್ಷೆ ಮೀನಾಕ್ಷಿ, ಸದಸ್ಯರಾದ ಮಣಿಕಂಠ, ಮಲ್ಲೇಶ್, ಲೀಲಾವತಿ, ಕೆ.ಬಿ. ಬಸವರಾಜು, ಮಹದೇವಸ್ವಾಮಿ, ಬಿ.ಮಹೇಶ್, ಪುಷ್ಪಾ, ಕೆ.ಎಂ.ಬಸವರಾಜು, ಮಹದೇವಿ, ಭಾಗ್ಯಾ, ನಾಗೇಂದ್ರ, ಶಿವಮ್ಮ, ಪುಟ್ಟನಂಜಮ್ಮ, ಗುತ್ತಿಗೆದಾರ ಶಾಂತಮೂರ್ತಿ, ಕೆ.ಸಿ.ವೀರೇಶ್, ಜಗಪತಿರಾವ್, ಸೀಹಳ್ಳಿ ಗುರುಮೂರ್ತಿ, ಕೃಷ್ಣ, ಪಂಚಾಯ್ತಿ ಪಿಡಿಒ ನಾಗರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net