

ಚಾಮರಾಜನಗರ: ತಾಲೂಕಿನ ಅಮಚವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗನಪುರ ಗ್ರಾಮಕ್ಕೆ ಹಲವು ವರ್ಷಗಳ ಬಳಿಕ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಒದಗಿಸಿರುವುದಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಸಿದ್ದಲಿಂಗನಪುರ ಗ್ರಾಮಕ್ಕೆ ಸುಮಾರು 25 ವರ್ಷಗಳಿಂದ ಕೆಎಸ್‌ಆರ್‌ಟಿಸಿ ಬಸ್ ಬರುತ್ತಿರಲಿಲ್ಲ. ಸುಮಾರು 5 ಕಿ.ಮೀ ದೂರ ಇರುವ ಅಮಚವಾಡಿಗೆ ಬಂದು ಬಸ್ ಹತ್ತಬೇಕಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಸಾರಿಗೆ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿ ಡಾ.ಬಿ.ಆರ್.ಅಂಬೇಡ್ಕರ್ ಬಳಗ, ಯುವಕರು, ಹಿರಿಯರು ಹೋರಾಟ ನಡೆಸುತ್ತಲೇ ಇದ್ದರು. ಇದರ ಲವಾಗಿ ಕೆಎಸ್‌ಆರ್‌ಟಿಸಿಯಿಂದ ಬಸ್ ಸೌಲಭ್ಯವನ್ನು ಒದಗಿಸಲಾಗಿದೆ. ಇದಕ್ಕೆ ಕಾರಣರಾದ ಜನಪ್ರತಿನಿಧಿಗಳು ಮತ್ತು ಕೆಎಸ್‌ಆರ್‌ಟಿಸಿ ನಿಗಮಕ್ಕೆ ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ. ಜತೆಗೆ ಈ ಮಾರ್ಗಕ್ಕೆ ಬೆಳಗ್ಗೆ ಮತ್ತು ಸಂಜೆ ವೇಳೆ ಮತ್ತೊಂದು ಬಸ್ ಸೌಲಭ್ಯವನ್ನು ನೀಡಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಕೋರಿದ್ದಾರೆ.
ಗ್ರಾಮಸ್ಥರಾದ ಯೋಗೇಶ್, ಎನ್.ಪ್ರದೀಪ, ಸಿದ್ದಪ್ಪಾಜಿ, ಮಹದೇವಸ್ವಾಮಿ, ಪ್ರತಾಪ್, ಮಾದೇಶ್, ಚಂದ್ರಶೇಖರ್, ಅಭಿ, ಶಂಕರಯ್ಯ, ಮಹದೇವಯ್ಯ, ಪುಟ್ಟಸ್ವಾಮಿ, ಚಿಕ್ಕಸ್ವಾಮಿ, ಶಿವಣ್ಣಶೆಟ್ಟಿ, ಭಾಗ್ಯರಾಜು ಹಾಗೂ ಮಹಿಳಾ ಸಂಘದ ಸದಸ್ಯರು, ವಿದ್ಯಾರ್ಥಿಗಳು, ಯುವಕರು ಗ್ರಾಮಸ್ಥರು ಇದ್ದರು.