

ಬೇಲೂರು: ತಾಲೂಕಿನ ಪ್ರವಾಸದಲ್ಲಿರುವ ಕೇಂದ್ರ ಇಂದನ ಮತ್ತು ಬಾರಿ ಕೈಗಾರಿಕ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಕೆ.ಎಸ್.ಲಿಂಗೇಶ್ ತಾಲೂಕಿನ ಚಿಲ್ಕೂರು ಹೊಸಳ್ಳಿ ಸಮೀಪ ರಣಘಟ್ಟ ನೀರಾವರಿ ಯೋಜನೆಯ ಕಾಮಗಾರಿಯನ್ನು ಸೋಮವಾರ ಸಂಜೆ ವೀಕ್ಷಿಸಿದರು.
ಕೇಂದ್ರ ಇಂದನ ಮತ್ತು ಬಾರಿ ಕೈಗಾರಿಕ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್, ರಾಜ್ಯ ಸರ್ಕಾರ ರಣಘಟ್ಟ ಯೋಜನೆ ಅನು?್ಠಾನಕ್ಕೆ 200 ಕೋಟಿ ರೂ, ಮೀಸಲಿರಿಸಿದ್ದು ಕಾಮಾಗಾರಿ ಚುರುಕಾಗಿ ಸಾಗಿದೆ. ಆದ?್ಟು ಬೇಗ ಕೆಲಸ ಮುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಯೋಜನೆಯಿಂದ ಹಾಸನ ಜಿಲ್ಲೆಯ ಬೇಲೂರು ತಾಲೂಕು, ಅರಸೀಕೆರೆ ತಾಲೂಕು ಹಾಗೂ ಚಿಕ್ಕಮಗಳೂರು ತಾಲೂಕಿನ ಹಲವು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದರು.
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಕೆ.ಎಸ್.ಲಿಂಗೇಶ್ ಬಿಜೆಪಿ ಜಿಲ್ಲಾಧ್ಯಕ್ಷ ಹೆ4ಚ್.ಕೆ.ಸುರೇಶ್, ಮಾಜಿ ಜಿಲ್ಲಾಧ್ಯಕ್ಷರಾದ ರೇಣುಕುಮಾರ್. ನವಿಲೇ ಅಣ್ಣಪ್ಪ, ಮಂಡಲ ಅಧ್ಯಕ್ಷ ಅಡಗೂರು ಆನಂದ್. ಜಿಲ್ಲಾ ಉಪಾಧ್ಯಕ್ಷ ಕೊರಟಿಕೆರೆ ಪ್ರಕಾಶ್. ಮುಖಂಡರಾದ ಸಿದ್ದೇಶ ನಾಗೇಂದ್ರ ಸೇರಿದಂತೆ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳಿದ್ದರು.