ಗ್ರಾಮಗಳ ಸ್ವಚ್ಛತೆಗೆ ಸಹಕರಿಸಿ

20200623_132303
Published on

ಡಿ.ಪಾಳ್ಯ : ಜನತೆಯ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವುದರೊಂದಿಗೆ ಮನೆಯಲ್ಲಿ ಸಂಗ್ರಹವಾಗುವ ಘನ ಮತ್ತು ದ್ರವ ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡುವುದು ಅವಶ್ಯಕವಾಗಿದೆ ಎಂದು ಶಾಸಕ ಎನ್. ಎಚ್. ಶಿವಶಂಕರರೆಡ್ಡಿ ತಿಳಿಸಿದರು.

ಹೋಬಳಿಯ ನಾಮಗೊಂಡ್ಲುವಿನಲ್ಲಿ ಘನ ಮತ್ತು ದ್ರವ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗಾಗಿ ಗ್ರಾಪಂನಿಂದ ಪ್ರತ್ಯೇಕ ಬಕೆಟ್‌ಗಳನ್ನು ಮಂಗಳವಾರ ವಿತರಣೆ ಮಾಡಿ ಮಾತನಾಡಿದರು.ಪ್ರತಿ ಮನೆಯಲ್ಲಿ ನಿತ್ಯ ಸಂಗ್ರಹವಾಗುವ ತ್ಯಾಜ್ಯವನ್ನು ವ್ಯವಸ್ಥಿತ ರೀತಿಯಲ್ಲಿ ವಿಲೇವಾರಿ ಮಾಡುವುದು ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಕಸವನ್ನು ಸಮೀಪದ ಬೀದಿ ಹಾಗೂ ಖಾಲಿ ನಿವೇಶನಗಳಿಗೆ ಎಸೆಯದೆ ಪ್ರತ್ಯೇಕ ಬಕೆಟ್‌ಗಳಲ್ಲಿ ಸಂಗ್ರಹಿಸಿ ಮನೆ ಬಾಗಿಲಿಗೆ ಬರುವ ವಾಹನಕ್ಕೆ ನೀಡಬೇಕು, ನಿಮ್ಮೆಲ್ಲರ ಸಹಕಾರದಿಂದ ಗ್ರಾಮವನ್ನು ಸ್ವಚ್ಛತೆಯೆಡೆಗೆ ಕೊಂಡೊಯ್ಯಬಹುದಾಗಿದೆ ಎಂದರು.

ಜಿಪಂ ಸದಸ್ಯೆ ಎ.ಅರುಂಧತಿ ಮಾತನಾಡಿ, ಸರ್ಕಾರವು ವಿವಿಧ ಯೋಜನೆಯಡಿಯಲ್ಲಿ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದ್ದು, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಇದರ ಸಮರ್ಪಕ ಬಳಕೆಯಾಗಬೇಕಾಗಿದೆ ಎಂದು ತಿಳಿಸಿದರು.

ತಾಪಂ ಅಧ್ಯಕ್ಷ ಆರ್. ಲೋಕೇಶ್, ತಾಪಂ ಸದಸ್ಯರಾದ ರಾಂಬಾಬು, ಶ್ರೀನಿವಾಸ್, ಗ್ರಾಪಂ ಅಧ್ಯಕ್ಷೆ ಅನಸೂಯಮ್ಮ, ಎಪಿಎಂಸಿ ಅಧ್ಯಕ್ಷ ಅಶ್ವತ್ಥರೆಡ್ಡಿ, ಪಿಡಿಒ ಮಂಜುನಾಥ ಚಾರಿ, ಲೆಕ್ಕ ಪರಿಶೋಧಕ ಕೆ. ಎಚ್. ವೆಂಕಟೇಶ, ಮುಖಂಡರಾದ ಅಶ್ವತ್ಥರೆಡ್ಡಿ, ಎಚ್.ಎನ್.ಪ್ರಕಾಶರೆಡ್ಡಿ, ಅಶ್ವತ್ಥಪ್ಪ, ಸಿ.ಪ್ರಕಾಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net