

ಚಿತ್ರದುರ್ಗ: ಪರಸ್ಪರ ಸಹಕಾರ ಮನೋಭಾವದಿಂದ ಗ್ರಾಪಂ ವ್ಯಾಪ್ತಿ ಗ್ರಾಮಗಳ ಸರ್ವಾಂಗೀಣ ಅಭಿವದ್ಧಿಗೆ ಎಲ್ಲ ಸದಸ್ಯರು ಶ್ರಮಿಸಬೇಕೆಂದು ಎಂಎಲ್‌ಸಿ ಕೆ.ಎಸ್.ನವೀನ್ ಹೇಳಿದರು.
ಚೋಳಗಟ್ಟ ಗ್ರಾಪಂ ವ್ಯಾಪ್ತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 14 ಮತ್ತು 15ನೇ ಹಣಕಾಸು ಯೋಜನೆ,ಶೇ.25 ಎಸ್ ಸಿ, ಎಸ್‌ಟಿ ಅನುದಾನದಡಿ ಅಂದಾಜು 44 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ಕೌಶಲ್ಯಾಭಿವದ್ಧಿ ತರಬೇತಿ ಕೇಂದ್ರ ಹಾಗೂ ಕಚೇರಿ ಮೇ ಲ್ಮಹಡಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು,ಗ್ರಾಪಂ ಸದಸ್ಯರು ಪಕ್ಷ ಭೇದ ಮರೆತು ಗ್ರಾಮಗಳ ಏಳಿಗೆಗೆ ಪ್ರಯತ್ನಿಸಬೇಕು.
ಚೋಳಗಟ್ಟ ಗ್ರಾಪಂ ಸದಸ್ಯರೆಲ್ಲರ ಒಮ್ಮನಿಸಿನ ಪ್ರಯತ್ನದಿಂದಾಗಿ ಈ ಗ್ರಾಪಂಕ್ಕೆ ಹಲವು ಪುರಸ್ಕಾರಗಳು ಲಭಿಸಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಗ್ರಾಪಂ ಅಧ್ಯಕ್ಷೆ ಮಂಜುಳಾ ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಾರದಮ್ಮ ಅಂಜಿನಮೂರ್ತಿ,ಸದಸ್ಯರಾದ ನಿರ್ಮಲಾ ವಿ.ಎನ್.ದೇವರಾಜ್,ಎಸ್.ಶಿವಣ್ಣ,ಕೆ.ಸಿ.ಗಂಗಾಧರಪ್ಪ,ಎನ್.ಪ್ರಾಣೇಶ,ವನಜಾಕ್ಷಮ್ಮ ಡಿ.ರಂಗಪ್ಪ,ಎಸ್.ತಿಪ್ಪೇಸ್ವಾಮಿ,ಕೆ.ಪಿ.ಅಮೂಲ್ಯ ಎಂ.ಕೆಂಚವೀರಪ್ಪ,ಪದ್ಮಾವತಿ ಶ್ರೀನಿವಾಸ,ವನಜಾಕ್ಷಮ್ಮ ಬಾಗಯ್ಯ,ಎಸ್.ಜಯಲಕ್ಷ್ಮೀಎನ್.ಕುಮಾರ, ಆರ್.ಸುರೇಶ್‌ಉಗ್ರಾಣ, ಎನ್. ಚಂದ್ರಶೇಖರ,ಎಚ್.ಸುರೇಶ,ಎಸ್.ಎಂ.ಮಮತಾಡಿ.ಎಂ.ಜಗದೀಶ್,ಗ್ರಾಪಂ ಪಿಡಿಒ ಆರ್.ರೂಪಕುಮಾರಿ,ಕಾರ‌್ಯದರ್ಶಿ ಆರ್.ಬಸವ ರಾಜಪ್ಪ ಹಾಗೂ ಕಾಂಗ್ರೆಸ್‌ಮುಖಂಡ ಕೆ.ಸಿ.ನಾಗರಾಜ್,ಪಂ.ರಾ.ಇಂಜಿನಿಯರಿಂಗ್ ವಿಭಾಗದ ಎಇಇ ಎನ್.ಪಾತಪ್ಪ ಮತ್ತಿತರರು ಇದ್ದರು.