

ಬಾಗೇಪಲ್ಲಿ :ಹಳ್ಳಿಗಳ ಸಮಗ್ರ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯಗಳ ಸೂಕ್ತ ಪರಿಹಾರಕ್ಕಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಹಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ೌಜೀಯಾ ತರನ್ನುಮ್ ತಿಳಿಸಿದರು.
ತಾಲೂಕಿನ ಪರಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ನರೇಗಾ ಯೋಜನೆಯಲ್ಲಿ ನಿರ್ಮಿಸಲಾದ ಕೃಷಿಹೊಂಡ, ರಸ್ತೆ ಹಾಗೂ ಶೌಚಗೃಹ ಕಾಮಗಾರಿಗಳನ್ನು ಶನಿವಾರ ಪರಿಶೀಲಿಸಿ ವಾತನಾಡಿದರು.ಅಂಗನಾವಾಡಿ ಕಟ್ಟಡ, ಸರ್ಕಾರಿ ಶಾಲೆ ಕಾಂಪೌಂಡ್, ಸಿ.ಸಿ.ರಸ್ತೆ, ಚರಂಡಿ, ಆಟದ ಮೈದಾನ, ಉದ್ಯಾನವನಗಳ ನಿರ್ವಾಣ, ಅಂತರ್ಜಲಮಟ್ಟ ವೃದ್ಧಿಸಲು ಕಲ್ಯಾಣಿಗಳ ಸ್ವಚ್ಚತೆ, ಕೆರೆ ಕುಂಟೆ ನಿರ್ವಾಣ, ಅರಣ್ಯ ಪ್ರದೇಶದಲ್ಲಿ ಬದು, ಚೆಕ್ ಡ್ಯಾಂ ನಿರ್ವಾಣಕ್ಕೆ ನರೇಗಾ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಪೂಲವಾರಪಲ್ಲಿಯಲ್ಲಿ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿದ ಸಿಇಒ, ಕರೋನಾ ಸೋಂಕಿತರಿಂದ ವಸತಿ, ಊಟ, ನಿರ್ವಹಣೆ ಹಾಗೂ ಸ್ವಚ್ಛತೆಯ ವಾಹಿತಿ ಪಡೆದರು, ಸೋಂಕಿತರು ಅತಂಕ ಪಡೆಯುವ ಆಗತ್ಯವಿಲ್ಲ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡರೆ ಸೋಂಕಿನಿಂದ ಶೀಘ್ರವೇ ಗುಣವಾಗಲು ಸಾಧ್ಯ ಎಂದು ಧೈರ್ಯ ತುಂಬಿದರು.
ತಾಲೂಕು ಪಂಚಾಯತಿ ಇಒ ಎಸ್.ಎನ್.ಮಂಜುನಾಥಸ್ವಾಮಿ, ಗ್ರಾಪಂ ನೋಡಲ್ ಅಧಿಕಾರಿ ಜಿ.ಗೀತಾ, ಪಿಡಿಒ ರಾಮಕೃಷ್ಣ, ಸಿಬ್ಬಂದಿ ಭಾಸ್ಕರ್‌ರೆಡ್ಡಿ ಇತರರಿದ್ದರು.