ಗ್ರಾಮಕ್ಕೆ ಹೊಸದಾಗಿ ಟವರ್ ನಿರ್ಮಿಸಲು ಗ್ರಾಮಸ್ಥರ ಮನವಿ

23 ckm 7
ಚಿಕ್ಕಮಗಳೂರು ಬಿಎಸ್‌ಎನ್‌ಎಲ್ ಟಿಎಸಿ ಸಮಿತಿ ಸದಸ್ಯ ವಿನೋದ್ ಬೊಗಸೆ ಅವರಿಗೆ ಮನವಿ ಸಲ್ಲಿಸಿದ ಕಸ್ಕೆಮನೆ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಕಸ್ಕೆಮನೆಯಲ್ಲಿ ಬಿಎಸ್‌ಎನ್‌ಎಲ್ ಟವರ್ ನಿರ್ಮಾಣ ಮಾಡುವಂತೆ ಒತ್ತಾಯಿಸಿದರು. ಕೆ.ಎಲ್.ಪೂರ್ಣೇಶ್, ನವೀನ್, ರಮೇಶ್, ಪ್ರೀತಮ್, ಕೆ.ಆರ್.ರತ್ನ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಕಸ್ಕೆಮನೆ ಗ್ರಾಮದಲ್ಲಿ ಹೊಸದಾಗಿ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ನಿರ್ಮಾಣ ಮಾಡಿಕೊಡಬೇಕು ಎಂದು ಕಸ್ಕೆಮನೆ, ಸಾರಗೋಡು, ಚಾಕುಲಮನೆ ಗ್ರಾಮಸ್ಥರು ಬಿಎಸ್‌ಎನ್‌ಎಲ್ ಟಿಎಸಿ ಸದಸ್ಯ ವಿನೋದ್ ಬೊಗಸೆ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಗ್ರಾಮಸ್ಥರು, ತಾಲ್ಲೂಕಿನ ಖಾಂಡ್ಯ ಹೋಬಳಿ, ಸಾರಗೋಡು, ಕಸ್ಕೆಮನೆ ಮತ್ತು ಅಕ್ಕಪಕ್ಕದ ಗ್ರಾಮಗಳಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಬಹುತೇಕ ಮಂದಿ ಬಿಎಸ್‌ಎನ್‌ಎಲ್ ಮೊಬೈಲ್ ಬಳಕೆದಾರರಾಗಿದ್ದಾರೆ ಎಂದರು.

ಗ್ರಾಮಗಳ ಸುತ್ತಮುತ್ತಲು ಯಾವುದೇ ಮೊಬೈಲ್ ಟವರ್‌ಗಳು ಇರುವುದಿಲ್ಲ. ಗ್ರಾಮದಿಂದ ಸುಮಾರು ೭ ಕಿ.ಮೀ. ದೂರದ ಹುಣಸೇಹಳ್ಳೀ ಗ್ರಾಮದ ಟವರ್‌ನ್ನು ನಂಬಿಕೊAಡಿz್ದೆÃವೆ. ಪ್ರಸ್ತುತ ದಿನಗಳಲ್ಲಿ ದೈನಂದಿನ ವ್ಯವಹಾರಗಳಿಗೆ ಮೊಬೈಲ್ ಅವಶ್ಯವಾಗಿದ್ದು ನೆಟ್‌ವರ್ಕ್ ಇಲ್ಲದೇ ಯಾವುದೇ ವ್ಯವಹಾರಗಳು ಮಾಡಲಾಗುತ್ತಿಲ್ಲ ಎಂದು ತಿಳಿಸಿದರು.

ಗ್ರಾಮದ ಮಕ್ಕಳು ಆನ್‌ಲೈನ್ ವಿದ್ಯಾಭ್ಯಾಸ, ಉದ್ಯೋಗ, ಆಸ್ಪತ್ರೆ ಹಾಗೂ ವೈದ್ಯಕೀಯ ಸೇವೆ ಸೇರಿದಂತೆ ಮುಂತಾದ ಯಾವುದೇ ಸೇವೆಗಳನ್ನು ಪಡೆಯಲು ನೆಟ್‌ವರ್ಕ್ ಸಮಸ್ಯೆಯಿದೆ. ಹೀಗಾಗಿ ಕಸ್ಕೆಮನೆ ಗ್ರಾಮದಲ್ಲಿ ಹೊಸದಾಗಿ ಟವರ್ ನಿರ್ಮಿಸಿದರೆ ಸುತ್ತಮುತ್ತಲಿನ ಗ್ರಾಮಗಳಿಗೆ ಬಹಳಷ್ಟು ಉಪಯೋಗವಾಗಲಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಟಿಎಸಿ ಸದಸ್ಯ ವಿನೋದ್, ಇದೀಗ ಹೊಸದಾಗಿ ೧೨೧ ಟವರಿಗೆ ಅನುಮೋದನೆ ದೊರೆಕಿದೆ ಹಾಗೂ ಇನ್ನೂ ಅಡಿಷನಲ್ ಟವರಿಗೆ ಆದ್ಯತೆಯನ್ನು ನೀಡಲಾಗುತ್ತಿದೆ. ಸಲಹಾ ಸಮಿತಿ ಸದಸ್ಯರೂ ಆಗಿರುವ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಆದೇಶದ ಮೇರೆಗೆ ಬಿಎಸ್‌ಎನ್‌ಎಲ್ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕೆ.ಎಲ್.ಪೂರ್ಣೇಶ್, ನವೀನ್, ರಮೇಶ್, ಪ್ರೀತಮ್, ಕೆ.ಆರ್.ರತ್ನ, ಸುಪ್ರೀತ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net