ಗ್ರಾಮಕ್ಕೆ ಬಸ್ ಸೌಲಭ್ಯ ಗ್ರಾಮಸ್ಥರಿಂದ ಸ್ವಾಗತ

BUS
Published on

ಚಿತ್ರದುರ್ಗ: ಜಿಲ್ಲಾ ಕೇಂದ್ರ ಚಿತ್ರದುರ್ಗದಿಂದ ಭರಮಸಾಗರ ಮಾರ್ಗವಾಗಿ ಕೋಗುಂಡೆ-ಕೋಡಿಹಳ್ಳಿಗೂ ಕೆಎಸ್‌ಆರ್‌ಟಿಸಿ ಬಸ್ ಸಂಚರಿಸಬೇಕೆಂಬ ಸಾರ್ವಜನಿಕರ ಬಹುದಿನಗಳ ಆಸೆ ಬುಧವಾರ ಈಡೇರಿದ್ದು, ಊರೊಳಗೆ ಬಸ್ ಪ್ರವೇಶಿಸುತ್ತಿದ್ದಂತೆ ಗ್ರಾಮಸ್ಥರು, ರೈತರು ಜೈಕಾರ ಹಾಕಿ ಸಂಭ್ರಮಿಸಿದರು.

ಬಸ್ ಸೌಲಭ್ಯ ಕಲ್ಪಿಸುವಂತೆ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಮೇ 19 ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ವೇಳೆ ನೂರಾರು ಮಹಿಳೆಯರು ಪಾಲ್ಗೊಂಡು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಉಪವಿಭಾಗಾಧಿಕಾರಿ, ಕೆಎಸ್‌ಆರ್‌ಟಿಸಿ ಡಿಸಿಗೆ ಮನವಿ ಸಲ್ಲಿಸಿದ್ದರು. ಇದರ ಫಲಪ್ರದವಾಗಿ ಕೋಡಿಹಳ್ಳಿ-ಕೊಗುಂಡೆ ಚಿತ್ರದುರ್ಗ ಮಾರ್ಗವಾಗಿ ಬಸ್ ಸಂಚರಿಸಿದ್ದು, ಗ್ರಾಮಸ್ಥರಲ್ಲಿ ಎಲ್ಲಿಲ್ಲದ ಸಂತಸಕ್ಕೆ ಕಾರಣವಾಯಿತು.

ರೈತ ಮುಖಂಡರಾದ ಕೋಗುಂಡೆ ರವಿಕುಮಾರ್, ಹನುಮಂತಪ್ಪ ಕೋಡಿಹಳ್ಳಿ, ಉಮಾದೇವಿ, ಅರುಣಿ ಸೇರಿ ಗ್ರಾಮಸ್ಥರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net