ಗ್ರಾಮ ಸ್ವರಾಜ್ಯದ ಕನಸು ಬಾಡಗಂಡಿಯಲ್ಲಿ ನನಸು

JOMD1725
ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದ ಎಸ್.ಆರ್.ಪಾಟೀಲ ಮೆಡಿಕಲ್ ಕಾಲೇಜ್ ಮೈದಾನದಲ್ಲಿ ಶನಿವಾರ ನಡೆದ ಎಸ್.ಆರ್.ಪಾಟೀಲ ಸಮೂಹ ಸಂಸ್ಥೆಗಳ ಅಡಿಯಲ್ಲಿ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ರಜತ ಮಹೋತ್ಸವ ಕಾರ್ಯಕ್ರಮ.
Published on

ಬಾಗಲಕೋಟೆ: ಮಹಾತ್ಮಾ ಗಾಂಜಿ ಅವರ ಗ್ರಾಮ ಸ್ವರಾಜ್ಯದ ಕನಸನ್ನು ಮಾಜಿ ಸಚಿವ ಎಸ್.ಆರ್.ಪಾಟೀಲ ಅವರು ತಾವು ಹುಟ್ಟಿದ ಊರು ಬಾಡಗಂಡಿಯಲ್ಲಿ ಸಂಪೂರ್ಣ ಅನುಷ್ಠಾನ ತರುವ ಮೂಲಕ ನನಸು ಮಾಡಿದ್ದಾರೆ. ನರ್ಸರಿಯಿಂದ ಪಿಜಿ ವರೆಗೂ ಶಿಕ್ಷಣ, ಮೆಡಿಕಲ್, ಆಯುರ್ವೇದ ಕಾಲೇಜ್ ಹಳ್ಳಿಯಲ್ಲಿ ಸ್ಥಾಪಿಸಿ ಇಡೀ ದೇಶದಲ್ಲಿ ತಮ್ಮ ಗ್ರಾಮವನ್ನು ಗುರುತಿಸುವಂತೆ ಮಾಡಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮುಕ್ತಕಂಠದಿ0ದ ಶ್ಲಾöÃಸಿದರು.

ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಶನಿವಾರ ನಡೆದ ಎಸ್.ಆರ್.ಪಾಟೀಲ ಸಮೂಹ ಸಂಸ್ಥೆಗಳ ಅಡಿಯಲ್ಲಿ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್‌ನ ರಜತ ಮಹೋತ್ಸವದ ನಿಮಿತ್ಯ ಬ್ಯಾಂಕಿನ ನವೀಕೃತ ಕಟ್ಟಡ, ಶಾಖಾ ನೂತನ ಕಟ್ಟಡ ಮತ್ತು ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಟ್ಟಡಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕೆಜಿಯಿಂದ ಪಿಜಿ ವರೆಗಿನ ವಿವಿಧ ಕಟ್ಟಡಗಳ ಶಂಕು ಸ್ಥಾಪನೆ ಮಾಡಿ ಮಾತನಾಡಿದರು.

ಬಾಡಗಂಡಿ ಒಂದು ಚಿಕ್ಕಗ್ರಾಮ. ಆದರೆ, ಇವತ್ತು ರಾಜ್ಯದ ಭೂಪಟದಲ್ಲಿ ಕಾಣುವಂತೆ ಆಗಿದ್ದರೆ ಅದರ ಸಂಪೂರ್ಣ ಶ್ರೇಯಸ್ಸು ಎಸ್.ಆರ್.ಪಾಟೀಲ ಅವರಿಗೆ ಸಲ್ಲುತ್ತದೆ. ಹಳ್ಳಿಯಲ್ಲಿ ಸಕ್ಕರೆ ಕಾರ್ಖಾನೆ, ಹಣಕಾಸು ಸಂಸ್ಥೆ, ಶಿಕ್ಷಣ ಸಂಸ್ಥೆ, ಮೆಡಿಕಲ್ ಕಾಲೇಜು ಸ್ಥಾಪಿಸಿ ಸಾವಿರ ಕೋಟಿ ರೂ.ವೆಚ್ಚ ಮಾಡಿದ್ದಾರೆ. ಆ ಮೂಲಕ ಅವರು ಇತಿಹಾಸದಲ್ಲಿ ಉಳಿಯುತ್ತಾರೆ ಎಂದರು.

ಬಾಡಗ0ಡಿಯಲ್ಲಿ ಎಸ್.ಆರ್.ಪಾಟೀಲ ಸಮೂಹ ಸಂಸ್ಥೆಗಳ ವಿವಿಧ ಸಂಸ್ಥೆಗಳನ್ನು ಕಂಡಾಗ ನಮಗೂ ಸಹ ನಾವು ಹುಟ್ಟಿದ ಊರಲ್ಲೂ ಇಂಥ ಕೆಲಸ ಮಾಡಬೇಕು ಎಂದು ಪ್ರೇರಣೆ ಬರುತ್ತಿದೆ. ಅವರ ಕಾರ್ಯಗಳು ನಮ್ಮೆಲ್ಲರನ್ನು ಬಡಿದೆಬ್ಬಿಸುತ್ತಿವೆ. ಗಾಂಽÃಜಿ ಅವರ ಕನಸನ್ನು ಅಕ್ಷರಶಃ ನನಸು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ನವೀಕೃತ ಕಟ್ಟಡ ಉದ್ಘಾಟಿಸಿ ಮಾತನಾಡಿದ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ, ಬೀಳಗಿ ಪಟ್ಟಣ ಬ್ಯಾಂಕ್ ೨೫ ವರ್ಷಗಳಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಬಹುದೊಡ್ಡ ಎತ್ತರಕ್ಕೆ ಬೆಳೆದು ರಾಜ್ಯದ ಅತ್ಯಂತ ದೊಡ್ಡ ೨೫ ಸಹಕಾರಿ ಬ್ಯಾಂಕ್‌ಗಳ ಸಾಲಿಗೆ ಬಂದು ನಿಂತಿದೆ. ಎಸ್.ಆರ್.ಪಾಟೀಲ ನೇತೃತ್ವದಲ್ಲಿ ಸಂಸ್ಥೆಯ ನಿರ್ದೇಶಕರು ಸೇರಿಕೊಂಡು ಶೇರುದಾರರ ವಿಶ್ವಾಸಕ್ಕೆ ಪಾತ್ರವಾಗಿ ಕೆಲಸ ಮಾಡಿದ್ದಾರೆ.

ಬಾಡಗಂಡಿ ಎನ್ನುವ ಗ್ರಾಮದಲ್ಲಿ ಇಷ್ಟೆಲ್ಲ ಸಂಸ್ಥೆಗಳು ಇವೆ ಎಂದರೆ ಬೆಂಗಳೂರನ ಜನರು ನಂಬಲಿಕ್ಕಿಲ್ಲ. ಒಂದು ಸರ್ಕಾರ ಮಾಡಬಹುದಾದ ಎಲ್ಲ ಕೆಲಸಗಳನ್ನು ಎಸ್.ಆರ್.ಪಾಟೀಲ ನಾಯಕತ್ವದಲ್ಲಿ ಇಲ್ಲಿ ಇಷ್ಟೆಲ್ಲ ಬೆಳವಣಿಗೆಯಾಗಿವೆ. ಅದಕ್ಕಾಗಿ ರಾಜ್ಯ ಸರ್ಕಾರದಿಂದ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ೧೧ ಲಕ್ಷ ಶೇರು ಬಂಡವಾಳದಿAದ ೨೫ ವರ್ಷಗಳ ಹಿಂದೆ ಆರಂಭವಾದ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಇವತ್ತು ೯೦೦ ಕೋಟಿ ರೂ. ವಹಿವಾಟು ನಡೆಸುತ್ತಿರುವುದು ದೊಡ್ಡ ಸಾಧನೆ. ಪ್ರಾಂಜಲ ಮನಸ್ಸಿನಿಂದ ಸಸಿ ನೆಟ್ಟರೆ ಮುಂದೆ ನಮ್ಮದಿಯ ನೆರಳು ಸಿಗುತ್ತದೆ ಎನ್ನುವ ಹಿರಿಯರ ಮಾತನ್ನು ಪಾಟೀಲ ಅವರು ಸಾಕ್ಷೀಕರಿಸಿದ್ದಾರೆ. ಅನೇಕರು ಬೇರೆಯವರು ಕಟ್ಟಿದ್ದ ಸಂಸ್ಥೆಯನ್ನು ಬೆಳೆಸಿದ್ದೇವೆ. ಆದರೆ, ಬಾಗಲಕೋಟೆ, ವಿಜಯಪುರ ಅಖಂಡ ಜಿಲ್ಲೆಯಲ್ಲಿ ಸ್ವಂತ ಸಂಸ್ಥೆಯನ್ನು ಕಟ್ಟಿ ಅದನ್ನು ದೊಡ್ಡಮಟ್ಟದಲ್ಲಿ ಬೆಳೆಸಿರುವ ಹಿರಿಯ ಜೀವಿ ಎಂದರೆ ಅದು ಎಸ್.ಆರ್.ಪಾಟೀಲ. ಇಡೀ ರಾಜ್ಯದಲ್ಲಿ ಜಿಲ್ಲಾ ಕೇಂದ್ರ, ನಗರ ಪ್ರದೇಶ ಹೊರತುಪಡಿಸಿ ಹಳ್ಳಿಯಲ್ಲಿ ಮೆಡಿಕಲ್ ಕಾಲೇಜ್ ಮಾಡಿರುವ ಏಕೈಕ ವ್ಯಕ್ತಿ ಇವರಾಗಿದ್ದಾರೆ ಎಂದು ಬಣ್ಣಿಸಿದರು.

ಇದೇ ವೇಳೆ ಜಾಜಿ ಮಲ್ಲಿಗೆ ಕವಿ ಡಾ.ಸತ್ಯಾನಂದ ಪಾತ್ರೋಟ ಸಂಪಾದಿಸಿದ `ಪರಿಶ್ರಮ' ನೆನಪಿನ ಸಂಚಿಕೆಯನ್ನು ಗದುಗಿನ ತೋಟದಾರ್ಯ ಮಠದ ಡಾ.ಸಿದ್ದರಾಮ ಮಹಾಸ್ವಾಮೀಜಿ ಬಿಡುಗಡೆ ಮಾಡಿ ಆರ್ಶೀವಚನ ನೀಡಿದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಪಾಟೀಲ ಸಮೂಹ ಸಂಸ್ಥೆ ನಡೆದು ಬಂದ ದಾರಿಯನ್ನು ಮೆಲಕು ಹಾಕಿದರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ಎಚ್.ವೈ.ಮೇಟಿ, ಭೀಮಸೇನ ಚಿಮ್ಮನಕಟ್ಟಿ, ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಎಚ್.ಆರ್.ನಿರಾಣಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ, ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದ ನಿಕಟಪೂರ್ವ ಕಾರ್ಯದರ್ಶಿ ಎಸ್.ಎಸ್.ಹಳ್ಳೂರ, ಬೀಳಗಿ ಪಟ್ಟಣ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ(ನಿ) ಎಲ್.ಬಿ.ಕುರ್ತಕೋಟಿ, ಬ್ಯಾಂಕಿನ ಉಪಾಧ್ಯಕ್ಷ ಎಸ್.ಆರ್.ಮೇಲ್ನಾಡ, ಪ್ರಧಾನ ವ್ಯವಸ್ಥಾಪಕ ಜಿ.ಎಸ್.ಬನಹಟ್ಟಿ, ಎಸ್.ಆರ್.ಪಿ.ಶಿಕ್ಷಣ ಪ್ರತಿಷ್ಠಾನದ ಚೇರಮನ್ ಉಮಾ ಎಸ್. ಪಾಟೀಲ ಹಾಗೂ ವಿವಿಧ ಸಂಸ್ಥೆಗಳ ಪ್ರಾಚಾರ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net