ಗ್ರಾಮ ಸಂಪರ್ಕ ರಸ್ತೆಗಳಿಗೆ ಬೇಲಿ!

28MDG1
Published on

ಮುಂಡರಗಿ: ಕರೊನಾ ವೈರಸ್ ತಡೆಗಟ್ಟಲು ತಾಲೂಕಿನ ವಿವಿಧ ಗ್ರಾಮಗಳ ಜನರು ತಮ್ಮ-ತಮ್ಮ ಗ್ರಾಮಗಳ ಸಂಪರ್ಕ ರಸ್ತೆಗಳಿಗೆ ಜಾಲಿಕಂಟಿ ಬೇಲಿ ಹಾಕಿ ಸಂಚಾರ ನಿರ್ಬಂಧಿಸುತ್ತಿದ್ದಾರೆ.

ತಾಲೂಕಿನ ನಾಗರಹಳ್ಳಿ ಗ್ರಾಮಸ್ಥರು ಕಕ್ಕೂರ, ಕಕ್ಕೂರತಾಂಡಾ, ಮುಂಡರಗಿ, ಬೆಣ್ಣಿಹಳ್ಳಿಗೆ ತೆರಳುವ ರಸ್ತೆಗಳಿಗೆ ಜಾಲಿಕಂಟಿ ಹಾಕಿದ್ದಾರೆ. ಹಾರೋಗೇರಿ, ಕಲಕೇರಿ, ಪೇಠಾಲೂರ, ಬೀಡನಾಳತಾಂಡಾ, ಶಿರೋಳ ಹೀಗೆ ಅನೇಕ ಗ್ರಾಮಗಳ ಜನರು ರಸ್ತೆಗಳಿಗೆ ಮುಳ್ಳಿನ ಬೇಲಿ ಹಾಕಿದ್ದಾರೆ. ಗ್ರಾಮಕ್ಕೆ ಬರುವವರು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡು ಬರಬೇಕು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಮಾತ್ರ ಮನೆಯಿಂದ ಹೊರಬರುವಂತೆ ತಿಳಿಸಲಾಗಿದೆ.

ಪಟ್ಟಣದಲ್ಲಿ ಬೆಳಗ್ಗೆ 6 ಗಂಟೆಯಿಂದ 10 ರವರೆಗೆ ಸಂತೆ, ಕಿರಾಣಿ ಮೊದಲಾದ ಅಗತ್ಯ ವಸ್ತುಗಳ ಅಂಗಡಿ ತೆರೆಯಲು ತಾಲೂಕು ಆಡಳಿತ ಅವಕಾಶ ಕೊಟ್ಟ ಪರಿಣಾಮ ಜನಸಂದಣಿ ಹೆಚ್ಚಾಗಿ ಕಂಡುಬರುತ್ತಿದೆ. ಸಾಮಾಜಿಕ ಅಂತರವನ್ನು ಯಾರೂ ಕೂಡ ಪಾಲಿಸುತ್ತಿಲ್ಲ.

ಬೆಳಗ್ಗೆ 6ರಿಂದ 10 ಗಂಟೆ ಸಮಯ ಹೊರತು ಪಡಿಸಿ ಉಳಿದ ಸಮಯದಲ್ಲಿ ಜನ ಓಡಾಡುವುದನ್ನು ಕಂಡರೆ ಪೊಲೀಸರು ಎಚ್ಚರಿಕೆ ನೀಡಿ ಮನೆಗೆ ಕಳುಹಿಸುತ್ತಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net