ಗ್ರಾಮ ಡಿಜಿ ವಿಕಸನ: ಪಿಡಿಒಗಳಿಗೆ ತರಬೇತಿ ಕಾರ್ಯಕ್ರಮ

13
Published on

ಮೈಸೂರು: ಶಿಕ್ಷಣ ಪ್ರತಿಷ್ಠಾನ ಸಂಸ್ಥೆಯು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಸಹಯೋಗದಲ್ಲಿ ಅನುಷ್ಠಾನಗೊಳಿಸಿರುವ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಈ ಯೋಜನೆಗೆ ಜಿಲ್ಲೆಯಲ್ಲಿ ಆಯ್ಕೆಯಾಗಿರುವ 39 ಗ್ರಾಮ ಪಂಚಾಯಿತಿಗಳ ಪಿಡಿಒಗಳು ಹಾಗೂ ಗ್ರಂಥಪಾಲಕರಿಗೆ ಗುರುವಾರ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಗುರುವಾರ ತರಬೇತಿ ನೀಡಲಾಯಿತು. ತರಬೇತಿಯನ್ನು ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ ಉದ್ಘಾಟಿಸಿದರು.

ಕಾರ್ಯಕ್ರಮಕ್ಕೆ ಪೂರಕವಾಗಿ ಒಂದು 32 ಇಂಚಿನ ಆ್ಯಂಡ್ರಾಯ್ಡಾ ಟಿವಿ, 4 ಮೊಬೈಲ್ ಫೋನ್‌ಗಳು, ಕ್ರೋಮ್ ಬುಕ್ (ಮಿನಿ ಲ್ಯಾಪ್‌ಟಾಪ್), 13 ಪಂಚಾಯಿತಿಗಳಿಗೆ ಅಂತರ್ಜಾಲ ಸಂಪರ್ಕವನ್ನು ಶಿಕ್ಷಣ ಪ್ರತಿಷ್ಠಾನದಿಂದ ಕಲ್ಪಿಸಲಾಗಿದೆ. ಆ್ಯಂಡ್ರಾಯ್ಡಾ ಟಿವಿ, ಮಿನಿ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಫೋನ್‌ಗಳಿಗೆ ಶಿಕ್ಷಣ ಪೀಡಿಯಾ ಎಂಬ ತಂತ್ರಾಂಶ ಅಳವಡಿಸಲಾಗಿದೆ. ಅದರಲ್ಲಿ 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಸ್ತುತ ಶೈಕ್ಷಣಿಕ ಸಾಲಿನ ಪಠ್ಯಕ್ರಮ ದೊರೆಯಲಿದೆ. ಅದಕ್ಕೆ ಸಂಬಂಧಿಸಿದ ವಿಡಿಯೊ ಪಾಠ, ಪಠ್ಯ, ಪ್ರಶ್ನೋತ್ತರಗಳು ಇರಲಿವೆ.

ಆಯ್ಕೆಯಾದ ಗ್ರಾಪಂಗಳು:

ಮೈಸೂರು ತಾಲೂಕು: ಹಾರೋಹಳ್ಳಿ (ಜಯಪುರ), ಮಾರ್ಬಳ್ಳಿ, ನಾಗವಾಲ, ದೊಡ್ಡಮಾರಗೌಡನಹಳ್ಳಿ, ವರುಣ, ಎಚ್.ಡಿ.ಕೋಟೆ: ಅಣ್ಣೂರು, ಅಂತರಸಂತೆ, ಭೀಮನಹಳ್ಳಿ, ಸವ್ವೆ, ಹೈರಿಗೆ, ಹಂಪಾಪುರ, ಎನ್.ಬೆಳತ್ತೂರು. ಸರಗೂರು: ಬಿದರಹಳ್ಳಿ, ಬಿ.ಮಟಕೆರೆ, ಸಾಗರೆ, ತುಂಬಸೋಗೆ, ಹಂಚಿಪುರ. ಹುಣಸೂರು: ಹಳೇಬೀಡು, ಕರ್ಣಕುಪ್ಪೆ, ಉಮ್ಮತ್ತೂರು, ಗೋವಿಂದನಹಳ್ಳಿ. ಪಿರಿಯಾಪಟ್ಟಣ: ದೊಡ್ಡಬ್ಯಾಲಾಳು, ಚಪ್ಪರದಹಳ್ಳಿ, ಇಟ್ನೆ ಹೆಬ್ಬಾಗಿಲು, ಬೆಟ್ಟದತುಂಗ ಕೆ.ಆರ್.ನಗರ: ಸಾಲಿಗ್ರಾಮ, ಹೆಬ್ಬಾಳು, ಲಾಳದೇವನಹಳ್ಳಿ, ನಂಜನಗೂಡು: ತಾಂಡವಪುರ, ದೇವೀರಮ್ಮನಹಳ್ಳಿ, ಹದಿನಾರು, ಹುಲ್ಲಹಳ್ಳಿ, ಹರದನಹಳ್ಳಿ, ತಿ.ನರಸೀಪುರ: ಮಲಿಯೂರು, ಅಂಕನಹಳ್ಳಿ, ತುರಗನೂರು, ಗರ್ಗೇಶ್ವರಿಪುರ, ರಂಗಸಮುದ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net