ಗ್ರಾಪಂನಲ್ಲಿ ಅವ್ಯವಹಾರ, ತನಿಖೆಗೆ ಆಗ್ರಹಿಸಿ ಸದಸ್ಯರ ಧರಣಿ

oplus_0
ಹುಲಸೂರ ಗ್ರಾಪಂನಲ್ಲಿ ನಡೆದಿರುವ ಅವ್ಯವಹಾರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಕಚೇರಿ ಮುಂದೆ ಸದಸ್ಯರು ಗುರುವಾರ ಧರಣಿ ನಡೆಸಿದರು. ದೇವೆಂದ್ರ ಪವಾರ್, ಸಂತೋಷ ಗಾಯಕವಾಡ, ನಾಗೇಶ ಮೇತ್ರೆ, ನಿತೇಶ ಪಾಟೀಲ್, ರೋಹಿಣಿ ಭಾಗವತ ಜಾನಬಾ, ಯಾಸ್ಮೀನ್, ಚಂದ್ರಕಲಾ ಇತರರಿದ್ದರು.
Published on

ಹುಲಸೂರು: ಹುಲಸೂರು ಗ್ರಾಪಂನಲ್ಲಿ ೧೫ನೇ ಹಣಕಾಸು ಯೋಜನೆ ಅಡಿಯಲ್ಲಿ ಅವ್ಯವಹಾರ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಗುರುವಾರ ಕಚೇರಿ ಮುಂಭಾಗದಲ್ಲಿ ೧೦ಕ್ಕೂ ಹೆಚ್ಚು ಸದಸ್ಯರು ಧರಣಿ ನಡೆಸಿದರು.

ಕಳೆದ ತಿಂಗಳಿನಲ್ಲಿ ೧೫ನೇ ಹಣಕಾಸಿನ ಲೆಕ್ಕ ಪರಿಶೋಧನೆಯ ಜಮಾ-ಖರ್ಚು ಕೊಡುವಂತೆ ಸಭೆಯಲ್ಲಿ ಗ್ರಾಪಂ ಪಿಡಿಒ ಅವರಿಗೆ ಮನವಿ ಪತ್ರ ಸಲ್ಲಿಸಿದರೂ ಸಹ ನಿರ್ಲಕ್ಷ್ಯ ಮಾಹಿತಿ ನೀಡದೆ ೩೫ ಲಕ್ಷ ರೂ. ಖರ್ಚು ಮಾಡಿರುವುದಾಗಿ ತಿಳಿದು ಬಂದಿದೆ. ತನಿಖೆ ನಡೆಸಲು ತಾಲೂಕು ಪಂಚಾಯಿತಿ ಇಒ ಗಮನಕ್ಕೆ ತಂದು ಮನವಿಪತ್ರ ಸಲ್ಲಿಸಿದರೂ ಪ್ರಯೋಜವಾಗಿಲ್ಲ ಆರೋಪಿಸಿದರು.

ಸಮಸ್ಯೆ ಬಗೆಹರಿಯುವ ತನಕ ಧರಣಿ ಹಿಂದಕ್ಕೆ ಪಡೆಯುವುದಿಲ್ಲ ಎಂದು ಸದಸ್ಯರು ಪಟ್ಟು ಹಿಡಿದರು. ಸಂಜೆ ಜಿಪಂ ಸಹಾಯಕ ಕಾರ್ಯದರ್ಶಿಗಳಾದ ಜಯಪ್ರಕಾಶ ಚವ್ಹಾಣ್, ಬಿರೇಂದ್ರ ಸಿಂಗ್, ತಹಸೀಲ್ದಾರ್ ಶಿವಾನಂದ ಮೇತ್ರೆ, ತಾಪಂ ಇಒ ಮಹದೇವ ಜಮ್ಮು ಸ್ಥಳಕ್ಕೆ ಭೇಟಿ ನೀಡಿ ಬರುವ ದಿನಗಳಲ್ಲಿ ತನಿಖೆ ನಡೆಸುವ ಭರವಸೆ ನೀಡಿದ ನಂತರ ಧರಣಿ ಹಿಂದಕ್ಕೆ ಪಡೆದರು.

ಗ್ರಾಪಂ ಪಿಡಿಒ ರಮೇಶ ಮೀಲಿಂದಕರ, ಸದಸ್ಯರಾದ ನಾಗೇಶ ಮೇತ್ರೆ, ದೇವೇಂದ್ರ ಪವಾರ್, ಸಂತೋಷ ಗಾಯಕವಾಡ, ನಿತೇಶ ಪಾಟೀಲ, ಸಂಜುಕುಮಾರ ಭೂಸಾರೆ, ರೋಹಿಣಿ ಭಾಗವತ ಜಾನಬಾ, ಯಾಸ್ಮೀನ್ ಪಟೇಲ್, ಸುನೀತಾ ಶಿವಕುಮಾರ, ಅನೀತಾ ಜಾಧವ್, ಪ್ರೇಮಲಾ ಚಂದ್ರಶೇಖರ, ಅನುಸಯಾಬಾಯಿ ಸೂರ್ಯಕಾಂತ, ಪಿಕೆಪಿಎಸ್ ಸಹಕಾರ ಸಂಘದ ನಿರ್ದೇಶಕ ಭಾಗವತ ಜಾನಬಾ, ಪ್ರಮುಖರಾದ ಅಂಕುಶ ಭೂಸಾರೆ, ರಾಮರತನ ಜಾಧವ್, ಸಿದ್ದರಾಮ ಪಾರಶೆಟ್ಟೆ ಇತರರಿದ್ದರು. ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಬರೆದ ಮನವಿ ಪತ್ರವನ್ನು ಜಿಪಂ ಸಹಾಯಕ ಕಾರ್ಯದರ್ಶಿಗಳಿಗೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net