ಗ್ರಾಪಂಗೊಂದು ಸಹಕಾರ ಸಂಘ ಸ್ಥಾಪನೆ ;ಪಿಕೆಪಿಎಸ್- ಹಾಲಿನ ಸಂಘ ಕಾರ್ಯದರ್ಶಿಗಳಿಗೆ ಸೇವಾ ಭದ್ರತೆ ಕಲ್ಪಿಸಲು ಚಿಂತನೆ ಸಚಿವ ರಾಜಣ್ಣ ಹೇಳಿಕೆ

Published on

ಸಹಕಾರ ಸಚಿವ ರಾಜಣ್ಣ ಘೋಷಣೆ | ಪಿಕೆಪಿಎಸ್- ಹಾಲಿನ ಸಂಘ ಕಾರ್ಯದರ್ಶಿಗಳಿಗೆ ಸೇವಾ ಭದ್ರತೆ ಕಲ್ಪಿಸಲು ಚಿಂತನೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ರೈತರ ಅನುಕೂಲಕ್ಕಾಗಿ ಕೃಷಿ ಚಟುವಟಿಕೆ ಉತ್ತೇಜಿಸಲು ರಾಜ್ಯದಲ್ಲಿ ಪ್ರತಿ ಗ್ರಾಮ ಪಂಚಾಯತಿಗೊAದು ಸಹಕಾರ ಸಂಘವನ್ನು ಸ್ಥಾಪನೆ ಮಾಡಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರಕಟಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಸಹಕಾರ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೈದ್ಯನಾಥನ್ ವರದಿಯಲ್ಲಿ ಗ್ರಾಪಂಗೊAದು  ಸಹಕಾರಿ ಸಂಘ ಸ್ಥಾಪನೆ ಮಾಡುವಂತೆ ಶಿಫಾರಸ್ಸು ಮಾಡಲಾಗಿದೆ. ಅದರಂತೆ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸ್ಥಾಪಿಸಲು ಸರ್ಕಾರ ಉz್ದೆÃಶಿಸಿದೆ ಎಂದರು.
೧೯೭೫-೭೬ರ  ಆಸು ಪಾಸಿನಲ್ಲಿ ಹಲವು ಸಹಕಾರಿ ಸಂಘಗಳು ಸ್ಥಾಪನೆಯಾಗಿವೆ.  ಆಗ ಹೆಚ್ಚಿನವರು ಸಹಕಾರಿಯಲ್ಲಿ  ತೊಡಗಿಸಿಕೊಂಡಿರಲಿಲ್ಲ.  ಈಗ  ಹೆಚ್ಚಿನವರು ಆಸಕ್ತಿ ತೋರುತ್ತಿದ್ದಾರೆ. ಅಲ್ಲದೆ ಸಹಕಾರಿ ಆಂದೋಲನ ಬೆಳೆಸಿ  ರೈತರಿಗೆ, ಹಾಲು ಉತ್ಪಾದಕರಿಗೆ, ಗ್ರಾಮೀಣರಿಗೆ ನೆರವಾಗಲು ಆರ್ಥಿಕ ಸಹಾಯ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಸಂಘಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.
ಕಾರ್ಯದರ್ಶಿಗಳಿಗೆ ಸೇವಾ ಭದ್ರತೆ
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್) ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ನಡೆಸಿಕೊಂಡು ಹೋಗುವ ಕಾರ್ಯ ಮಾಡುತ್ತಿರುವ ಕಾರ್ಯದರ್ಶಿಗಳಿಗೆ ಸೇವಾ ಭದ್ರತೆ ಕಲ್ಪಿಸಲು ಸರ್ಕಾರ ಚಿಂತನೆ  ನಡೆದೆ ಎಂದು ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
೬೦೦೦ ಪಿಕೆಪಿಎಸ್ ಹಾಗೂ  ಅಂದಾಜು ೧೬,೦೦೦  ಹಾಲು ಉತ್ಪಾದಕ ಸಂಘಗಳಿವೆ. ಇವೆರಡು ಒಳಗೊಂಡAತೆ ಸುಮಾರು ೨೨ ಸಾವಿರ  ಕಾರ್ಯದರ್ಶಿಗಳು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇದುವರೆಗೂ ಸೇವಾ ಭದ್ರತೆ ಇಲ್ಲ. ಅವರಿಗೆ ಯಾವ ತೆರನಾಗಿ ಸೇವಾ ಭದ್ರತೆ ಕಲ್ಪಿಸಿ ಆ ಎಲ್ಲ ಕುಟುಂಬಗಳಿಗೆ ಅನುವು ಮಾಡಿಕೊಡಬಹುದು ಎಂಬುದರ ಕುರಿತು ಯೋಚನೆ ಮಾಡಲಾಗುತ್ತಿದೆ. ಅದಕ್ಕಾಗಿ ಇಲಾಖೆ ಅಧಿಕಾರಿಗಳ ಸಮಿತಿ ರಚನೆ ಮಾಡಿ ವರದಿ ತರಿಸಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು  ಎಂದು ವಿವರಿಸಿದರು.
ಪಿಕೆಪಿಎಸ್‌ಗಳನ್ನು ಚೆನ್ನಾಗಿ ನಿರ್ವಹಣೆ ಮಾಡಿಕೊಂಡು ಹೋಗುವ ಮೂಲಕ ಡಿಸಿಸಿ ಬ್ಯಾಂಕ್‌ಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ.ಕೆಲ ಸಂದರ್ಭಗಳಲ್ಲಿ ಆಡಳಿತ ಮಂಡಳಿ ನಿರ್ಧಾರದಿಂದಾಗಿ ಹಲವರು ಕೆಲಸ ಕಳೆದುಕೊಂಡಿರುವ ಉದಾಹರಣೆಗಳಿವೆ. ಈಗ ಕೆಲಸ ಮಾಡುತ್ತಿರುವವರಿಗೆ ಭವಿಷ್ಯದಲ್ಲಿ ತೊಂದರೆ ಆಗಬಾರದು ಎಂಬುದು ಸರ್ಕಾರ ಉz್ದÉÃಶ. ಪಿಂಚಣಿ ಇನ್ನಿತರ ಸವಲತ್ತುಗಳಿಲ್ಲ. ಅವರಿಗೆ ಸೇವಾ ಭದ್ರತೆ ನೀಡಬೇಕು ಎಂಬ ಆಶಯಶದೊಂದಿಗೆ  ಪೂರಕ ಕೆಲಸ ಆರಂಭಿಸಲಾಗಿದೆ ಎಂದು ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net