ಗ್ರಾಪಂಗಳ ಅಧಿಕಾರ ಅತ್ಯಂತ ಮಹತ್ವ

19sor1
Published on

ಸೊರಬ: ಗ್ರಾಪಂಗಳ ಅಧಿಕಾರ ಮಹತ್ವಪೂರ್ಣವಾಗಿದ್ದು, ಸರ್ಕಾರದ ಆದೇಶಗಳನ್ನು ಪರಿಣಾಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.

ತಾಲೂಕಿನ ಅಂಡಿಗೆ ಗ್ರಾಪಂ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಗ್ರಾಪಂಗಳಲ್ಲಿ ಭ್ರಷ್ಟಾಚಾರ ರಹಿತ ಹಾಗೂ ಪಕ್ಷಾತೀತವಾಗಿ ಕೆಲಸ-ಕಾರ್ಯಗಳು ನಡೆದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ. ತಾಲೂಕಿನ ಅಭಿವೃದ್ಧಿಗೆ ಅನುದಾನ ಬಂದಿದ್ದು ಇನ್ನೂ ಹೆಚ್ಚು ಅನುದಾನ ಅಗತ್ಯವಿದೆ ಎಂದರು.

ಅಂಡಿಗೆ ಗ್ರಾಪಂ ಅಧ್ಯಕ್ಷ ಎ.ಎಸ್.ಹೇಮಚಂದ್ರ ಮಾತನಾಡಿ, ತಾಲೂಕಿನಲಿ ್ಲಂಡಿಗೆ ಗ್ರಾಪಂ ಸುವ್ಯವಸ್ಥಿತ ಸ್ವಂತ ಕಟ್ಟಡ ಹಾಗೂ ಅಭಿವೃದ್ಧಿಯಿಂದ ಗುರುತಿಸಿಕೊಂಡಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ 6 ಗ್ರಾಮಗಳಿದ್ದು 120 ಮನೆ ನಿರ್ವಿುಸಲಾಗಿದೆ. ನರೇಗಾ ಯೋಜನೆಯಡಿ 1.93 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಗ್ರಾಪಂ ಉಪಾಧ್ಯಕ್ಷೆ ಭಾಗ್ಯಾ ಈಶ್ವರಪ್ಪ, ಸದಸ್ಯರಾದ ಲೋಕೇಶ್ ಉರಗನಹಳ್ಳಿ, ನಿರಂಜನಮೂರ್ತಿ, ಬಸವರಾಜ್ ಅಕ್ಕಿ, ಶೀಲಾ ರಮೇಶ್, ಅನಿತಾ ಮಲ್ಲಿಕಾರ್ಜುನ್, ಶೋಭಾ ಹೂವಪ್ಪ, ಕಾರ್ಯದರ್ಶಿ ರವಿಕುಮಾರ್, ಅಂಡಿಗೆ ಸಹಕಾರಿ ಸಂಘದ ಅಧ್ಯಕ್ಷ ಕೆ.ಪಿ.ಷಣ್ಮುಖಪ್ಪ, ತಾಪಂ ಸದಸ್ಯ ನಾಗರಾಜ್ ಚಿಕ್ಕಸವಿ, ಬಗರ್​ಹುಕಂ ಸಮಿತಿ ಸದಸ್ಯ ದೇವೇಂದ್ರಪ್ಪ, ಪಪಂ ಸದಸ್ಯ ಎಂ.ಡಿ.ಉಮೇಶ್, ಹಾಪ್​ಕಾಮ್ಸ್ ಸದಸ್ಯ ಅಶೋಕ್ ನಾಯ್ಕ, ಭೋಗೇಶ್, ಇಒ ನಂದಿನಿ, ಇಂಜಿನಿಯರ್ ಸೌಮ್ಯಾ, ಪಿಎಸ್​ಐ ಪ್ರಶಾಂತ್ ಕುಮಾರ್ ಇದ್ದರು. ಪಿಡಿಒ ಕೆ.ಆರ್.ಸಂದೀಪ್ ನಿರೂಪಿಸಿದರು. ನಂದಿತಾ ಮತ್ತು ರೇಣುಕಾ ಪ್ರಾರ್ಥಿಸಿದರು. ಬಿಎಲ್​ಒ ಲೋಕೇಶ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net