ಗ್ರಾಪಂ ಹಾಲಿ ಸದಸ್ಯರನ್ನೆ ಮುಂದುವರಿಸಿ

30Bk1
Published on

ಬಸವಕಲ್ಯಾಣ: ಹಾಲಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಮುಂದುವರಿಸಬೇಕು ಎಂದು ವೇಲ್ಫೆರ್ ಪಾರ್ಟಿ ಆಫ್ ಇಂಡಿಯಾ ತಾಲೂಕು ಘಟಕ ಮನವಿ ಮಾಡಿದೆ. ಈ ಕುರಿತು ಪಕ್ಷದ ರಾಜ್ಯ ಕಾರ್ಯದರ್ಶಿ ಮುಜಾಹಿದ್ಪಾಶಾ ಖುರೇಶಿ ಅವರ ನೇತೃತ್ವದಲ್ಲಿಯ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಉಪ ತಹಸೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಸಲ್ಲಿಸಲಾಯಿತು.
ಗ್ರಾಪಂಗಳ ಅವಧಿ ಮೇ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಕೆಲ ಗ್ರಾಪಂ ಅವಧಿ ಜೂನ್ ಮತ್ತು ಜುಲೈನಲ್ಲಿ ಮುಗಿಯಲಿದೆ. ಮೇ ಮತ್ತು ಜೂನ್ನಲ್ಲಿ ರಾಜ್ಯದ 6041 ಗ್ರಾಪಂಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಬೇಕಿದೆ. ಕೋವಿಡ್ -19ನ್ನು ಕೇಂದ್ರ ಸಕರ್ಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸಕರ್ಾರ ಇದನ್ನೇ ನೆಪ ಮಾಡಿಕೊಂಡು ಗ್ರಾಪಂ ಚುನಾವಣೆ ಮುಂದೂಡಿ, ಅಡಲಿತ ಸಮಿತಿ ಅಥವಾ ಆಡಳಿತಾಧಿಕಾರಿ ನೇಮಿಸಲು ಮುಂದಾಗಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಚುನಾವಣೆ ಮುಂದೂಡುವ ಅನಿವಾರ್ಯ ಪರಿಸ್ಥಿತಿ ನಿಮರ್ಾಣವಾದರೆ ಆಡಳಿತ ಸಮಿತಿಯ ಬದಲು ಹಾಲಿ ಸದಸ್ಯರನ್ನು ಮುಂದುವರಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ. ಪ್ರಮುಖರಾದ ಮಹ್ಮದ್ ಇಸ್ಮಾಯಿಲ್ ಬಿಲಾಲ್, ಯಾಕುಬ್ ಅಕ್ತರ್, ಪರ್ವೇಜ್ ಕಾರಿಗಾರ, ಮಹ್ಮದ್ ಅರ್ಫಾದ್​ ಅಹ್ಮದ್, ಮಹ್ಮದ್ ಜಾವೇದ್, ಮಹ್ಮದ್ ಜುಬೇರ್, ಮಹ್ಮದ್ ಝಿಯಾ, ಜುಬೇರ ನವಾಜಭಾಯಿ, ನಿಜಾಮೋದ್ದಿನ್, ಗೌಸೋದ್ದಿನ್, ಮುಸಾ, ಖುತಬೋದ್ದಿನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net