ಗ್ರಾಪಂ ಸದಸ್ಯ ಗಡಿಪಾರು

maraling roudisheetar
Published on

ಕಲಬುರಗಿ: ನಗರ ರಹತಾಬಾದ್​ ಪೊಲೀಸ್​ ಠಾಣೆ ವ್ಯಾಪ್ತಿಯ ನಡುವಿನ ಹಳ್ಳಿ ಗ್ರಾಮದ ರೂಢಿಗತ ಅಪರಾಧಿ, ಗ್ರಾಮ ಪಂಚಾಯಿತಿ ಸದಸ್ಯ ಮರಲಿಂಗ ಮಲ್ಲಾಬಾದಿ (೪೧)ಯನ್ನು ರಾಯಚೂರು ಜಿಲ್ಲೆಯ ಪಶ್ಚಿಮ ಪೊಲೀಸ್​ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ೨೦೧೦ರಿಂದ ೨೪ರವರೆಗೆ ಐಪಿಸಿ ಪ್ರಕಾರ ಐದು ಪ್ರಕರಣ, ಬಿಎನ್​ಎಸ್​ ಪ್ರಕಾರ ಮೂರು ಸೇರಿ ಒಟ್ಟು ಎಂಟು ಪ್ರಕರಣ ರಹತಾಬಾದ್​ ಪೊಲೀಸ್​ ಠಾಣೆಯಲ್ಲಿ ಈತನ ವಿರುದ್ಧ ದಾಖಲಾಗಿದ್ದವು. ರೂಢಿಗತ ಅಪರಾಧಿಯಾಗಿದ್ದು, ರೌಡಿ ಶೀಟ್​ ಚಾಲ್ತಿಯಲ್ಲಿದೆ. ಈ ವ್ಯಕ್ತಿ ಸರ‍್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ತಂದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದು, ಇತನ್ನು ಗಡಿಪಾರು ಮಾಡುವುದು ಸೂಕ್ತ ಎಂದು ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ ಅವರ ಮರ‍್ಗರ‍್ಶನದಲ್ಲಿ ಪಿಐ ಮಲ್ಲಿಕರ‍್ಜುನ ಇಕ್ಕಳಕಿ ವರದಿ ಸಲ್ಲಿಸಿದ್ದರು. ವರದಿ ಅನ್ವಯ ಡಿಸಿಪಿ ಕನಿಕಾ ಸಿಕ್ರಿವಾಲ್​ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net