ಗ್ರಾಪಂ ಮಟ್ಟದಲ್ಲಿ ನನ್ನ ಮಣ್ಣು, ನನ್ನ ದೇಶ ಅಭಿಯಾನ

My soil my country campaign at the village level
ಇಂಡಿ: ನನ್ನ ಮಣ್ಣು ನನ್ನ ದೇಶ ಲೋಗೊದ ಭಾವಚಿತ್ರ
Published on

ಇಂಡಿ: ತಾಲೂಕಿನ 38 ಗ್ರಾಪಂಗಳಲ್ಲಿ ನನ್ನ ಮಣ್ಣು, ನನ್ನ ದೇಶ ಅಭಿಯಾನ ಯಶಸ್ವಿಗೊಳಿಸಲು ಪಿಡಿಒಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಾಪಂ ಇಒ ಸುನೀಲ ಮುದ್ದೀನ ತಿಳಿಸಿದ್ದಾರೆ.

ಶನಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಗ್ರಾಪಂಗಳಿಂದ ಮಣ್ಣು ಸಂಗ್ರಹಿಸಿ ಆ. 15ರೊಳಗೆ ತಾಪಂಗೆ ತರಬೇಕು. ಇಲ್ಲಿಂದ ಜಿಲ್ಲೆಗೆ ಕಳುಹಿಸಿ ಕೊಡಲಾಗುವುದು. ಕಳಶದಲ್ಲಿ ತಂದಿರುವ ಮಣ್ಣನ್ನು ರಾಜ್ಯದ ಮೂಲಕ ದಿಲ್ಲಿಗೆ ಕಳುಹಿಸಿ ಕೊಡುವ ವ್ಯವಸ್ಥೆಯನ್ನು ಜಿಲ್ಲಾಮಟ್ಟದಲ್ಲಿ ಮಾಡಿದ್ದಾರೆ ಎಂದರು.

ಶಿಲಾಫಲಕ, ಸಮರ್ಪಣೆ, ಮಕ್ಕಳಿಗೆ ನಾನಾ ಸ್ಪರ್ಧೆಗಳು, ವೀರರಿಗೆ ಗೌರವ ಸಮರ್ಪಣೆ, ರಾಷ್ಟ್ರಧ್ವಜ ವಂದನೆ ಸೇರಿದಂತೆ ನಾನಾ ಕಾರ್ಯಕ್ರಮಗಳು ಪ್ರತಿ ಗ್ರಾಪಂಗಳಲ್ಲಿ ನಡೆಯುತ್ತವೆ. ವಸುಧಾ ಕಾರ್ಯಕ್ರಮದ ಅಡಿಯಲ್ಲಿ ಎಲ್ಲ ಗ್ರಾಪಂ ಅಡಿಯಲ್ಲಿ 100 ಸಸಿಗಳನ್ನು ನೆಟ್ಟು ಪೋಷಿಸಲು ಕ್ರಮವಹಿಸಲಾಗಿದೆ.

ಅಮೃತ ಸರೋವರ, ಗ್ರಾಪಂ ಕಾರ್ಯಾಲಯ ಆವರಣ, ಸರ್ಕಾರಿ ಶಾಲೆ ಆವರಣದಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಆ. 15ರ ಸ್ವಾತಂತ್ರೊೃೀತ್ಸದದಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಮಡಿದ ವೀರ ಸೇನಾನಿಗಳ ಕುಟುಂಬದವರು, ಬದುಕಿರುವ ಸೇನಾನಿಗಳು, ಸ್ವಾತಂತ್ರೃ ಹೋರಾಟಗಾರರು, ನಿವೃತ್ತ ರಕ್ಷಣಾ ಸಿಬ್ಬಂದಿ, ಗಣ್ಯರಿಂದ ಧ್ವಜಾರೋಹಣ ಮಾಡಿಸಲು ಗ್ರಾಪಂ ಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಜೀವ ವೈವಿಧ್ಯ ಹಾಗೂ ಔಷಧೀಯ ಗುಣವುಳ್ಳ 75 ಸಸಿಗಳನ್ನು ಅಮೃತ ಸರೋವರ ಸ್ಥಳಗಳಲ್ಲಿ ನೆಟ್ಟು ಅಮೃತ ವಾಟಿಕೆಯನ್ನು ಅಭಿವೃದ್ಧಿಪಡಿಸಿ, ಮಾತೃ ಭೂಮಿಗೆ ಗೌರವ ಸಲ್ಲಿಸಲಾಗುವುದು.
ಸಿದರಾಯ ಬಿರಾದಾರ, ಪಿಡಿಒ ಬಬಲಾದ
ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ ಯಶಸ್ವುಗೊಳಿಸಲು ಗ್ರಾಪಂಗಳು, ಮಹಾತ್ಮಾಗಾಂಧಿ ನರೇಗಾ ಯೋಜನೆ, ರಾಷ್ಟ್ರೀಯ ಜೀವನೋಪಾಯ ಯೋಜನೆ, ರಾಷ್ಟ್ರೀಯ ತೋಟಗಾರಿಕೆ ಯೋಜನೆ ಹಾಗೂ ಅರಣ್ಯ, ಶಿಕ್ಷಣ, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಯುವಜನ ಸೇವಾ ಯೋಜನೆ, ರಾಷ್ಟ್ರೀಯ ಸೇವಾ ಯೋಜನೆ, ನೆಹರು ಯುವಕ ಕೇಂದ್ರ ಸಹಯೋಗದಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕ್ರಮ ವಹಿಸಲಾಗಿದೆ.
ರಾಹುಲ್ ಶಿಂಧೆ, ಸಿಇಒ ವಿಜಯಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net