ಗ್ರಾಪಂ, ನಗರಸಭೆ ಸ್ಥಾನಕ್ಕೆ ನ.23ಕ್ಕೆ ಮತದಾನ

ctd 0001...
Published on

ಚಿತ್ರದುರ್ಗ:ಚಿತ್ರದುರ್ಗ ನಗರಸಭೆ ಹಾಗೂ ಚಿತ್ರದುರ್ಗ ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ತೆರವಾದ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಈ ಸಂಬಂಧ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ರಾಜಕೀಯ ಪಕ್ಷಗಳ ಸಭೆ ನಡೆಸಲಾಯಿತು.

ತಹಸೀಲ್ದಾರ್ ಡಾ.ನಾಗವೇಣಿ, ಪೌರಾಯಕ್ತೆ ಎಂ.ರೇಣುಕಾ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕರಡು ಮತದಾರರ ಪಟ್ಟಿ, ಚುನಾವಣಾ ವೇಳಾಪಟ್ಟಿ ವಿವರ ತಿಳಿಸಲಾಯಿತು.

ಚಿಕ್ಕಗೊಂಡನಹಳ್ಳಿ ಗ್ರಾಪಂ ಗೊಲ್ಲರಹಟ್ಟಿ ಕ್ಷೇತ್ರಕ್ಕೆ ಸಾಮಾನ್ಯ (ಮಹಿಳೆ), ಭರಮಸಾಗರ ಗ್ರಾಪಂ ಭರಮಸಾಗರ-4ರ ಕ್ಷೇತ್ರಕ್ಕೆ ಸಾಮಾನ್ಯ(ಮಹಿಳೆ), ಹಿರೇಗುಂಟನೂರು ಗ್ರಾಪಂ ಗೊಲ್ಲರಹಟ್ಟಿ ಕ್ಷೇತ್ರ ಸಾಮಾನ್ಯ, ಜಂಪಣ್ಣನಾಯಕನಕೋಟೆ ಗ್ರಾಪಂ ಜಂಪಣ್ಣನಾಯಕನಕೋಟೆ-1ರ ಕ್ಷೇತ್ರಕ್ಕೆ ಸಾಮಾನ್ಯ(ಮಹಿಳೆ) ಹಾಗೂ ಚಿತ್ರದುರ್ಗ ನಗರಸಭೆ ವಾರ್ಡ್ ಸಂಖ್ಯೆ-15ರ ಕ್ಷೇತ್ರಕ್ಕೆ ಹಿಂದುಳಿದ ವರ್ಗ(ಎ)ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ನಗರಸಭೆಯ ಒಂದು ಸದಸ್ಯ ಸ್ಥಾನಕ್ಕೆ ನಗರಸಭೆ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬೇಕಿದೆ. ನವೆಂಬರ್4ರಂದು ಡಿಸಿ ಚುನಾವಣೆ ಅ ಧಿಸೂಚನೆ ಹೊರಡಿಸುವರು.11ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, 12ರಂದು ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂ ತೆಗೆದುಕೊಳ್ಳಲು ನ.14 ಕೊನೆಯ ದಿನ. ನ.23ರಂದು ಚುನಾವಣೆ ಹಾಗೂ 26 ರಂದು ಬೆಳಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ.

ಗ್ರಾಪಂ ಚುನಾವಣೆಗೆ ಸಂಬಂಧಿಸಿದ ಗ್ರಾಪಂ ಕಚೇರಿಗಳಲ್ಲಿ ನವೆಂಬರ್ 6ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, 12 ಕೊನೆಯ ದಿನ. 13ರಂದು ನಾ ಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ನ.15 ಕೊನೆಯ ದಿನ. 23ರಂದು ಚುನಾವಣೆ ಹಾಗೂ 26ರಂದು ಬೆಳಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net