

ಬೀದರ್: ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಸಿದ್ಧತೆಯನ್ನು ಶನಿವಾರ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹಾಗೂ ಎಸ್ಪಿ ನಾಗೇಶ ಡಿ.ಎಲ್. ವೀಕ್ಷಿಸಿದರು. ವಿವಿಧೆಡೆ ತೆರಳಿ ಮತಯಂತ್ರಗಳನ್ನು ಪರಿಶೀಲಿಸಿದರು.
ಹುಮನಾಬಾದ್, ಭಾಲ್ಕಿ, ಬಸವಕಲ್ಯಾಣ, ಚಿಟಗುಪ್ಪ ಮತ್ತು ಹುಲಸೂರು ತಾಲೂಕುಗಳಿಗೆ ಸಂಬಂಧಿಸಿದ ಮತಯಂತ್ರಗಳಲ್ಲಿ ಮತ ಪತ್ರ ಮತ್ತು ಅಭ್ಯಥರ್ಿಗಳ ಸಂಖ್ಯೆ ಅಳವಡಿಸುವ ಪ್ರಕ್ರಿಯೆ ವೀಕ್ಷಿಸಿದರು.
ಮೊದಲು ಭಾಲ್ಕಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಸಕರ್ಾರಿ ಪ್ರೌಢ ಶಾಲೆಯಲ್ಲಿ ನಡೆದಿರುವ ಕ್ಯಾಂಡಿಡೇಟ್ ಸೆಟ್ಟಿಂಗ್ ಪ್ರಕ್ರಿಯೆ ವೀಕ್ಷಿಸಿದರು. ಯಾವುದೇ ತೆರನಾದ ಲೋಪವಾಗದಂತೆ ನೋಡಿಕೊಳ್ಳಿ ಎಂದು ತಹಸೀಲ್ದಾರ್ ಅಣ್ಣಾರಾವ್ ಪಾಟೀಲ್ ಅವರಿಗೆ ಸೂಚಿಸಿದರು. ಭಾಲ್ಕಿಯ 40 ಗ್ರಾಪಂ ಚುನಾವಣೆಗೆ ಪ್ರತ್ಯೇಕವಾಗಿ 40 ಕೌಂಟರ್, 40 ಟೇಬಲ್ ಮಾಡಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದರು.
ಬಳಿಕ ಬಸವಕಲ್ಯಾಣಕ್ಕೆ ತೆರಳಿದ ಡಿಸಿ ಮತ್ತು ಎಸ್ಪಿ, ಬಸವೇಶ್ವರ ಪ್ರೌಢ ಶಾಲೆಯಲ್ಲಿ ನಡೆಯುತ್ತಿದ್ದ ಸಿದ್ಧತಾ ಕಾರ್ಯವನ್ನು ವೀಕ್ಷಿಸಿ ತಹಸೀಲ್ದಾರ್ ಸಾವಿತ್ರಿ ಸಲಗರ ಅವರಿಂದ ಮಾಹಿತಿ ನೀಡಿದರು. ನಂತರ ಹುಮನಾಬಾದ್ಗೆ ತೆರಳಿ ರಾಮ್ ಆ್ಯಂಡ್ ರಾಜ್ ಕಾಲೇಜಿಗೆ ಭೇಟಿ ನೀಡಿ ನಡೆದಿರುವ ಸಿದ್ಧತಾ ಕಾರ್ಯವನ್ನು ಗಮನಿಸಿದರು. ಶಾಂತ ರೀತಿಯಲ್ಲಿ ಚುನಾವಣೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಮತ್ತು ಚುನಾವಣಾ ಅಧಿಕಾರಿ, ಸಿಬ್ಬಂದಿಗೆ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಸಹಾಯಕ ಆಯುಕ್ತ ಭುವನೇಶ ಪಾಟೀಲ್, ಚುನಾವಣಾ ಮಾಸ್ಟರ್ ಟ್ರೇನರ್ ಗೌತಮ ಅರಳಿ ಇತರರಿದ್ದರು.