

ರಾಯಬಾಗ: ತಾಲೂಕಿನ ಯಡ್ರಾಂವ, ಸಿದ್ದಾಪುರ ಮತ್ತು ಯಲ್ಪಾರಟ್ಟಿ ಗ್ರಾಮ ಪಂಚಾಯಿತಿ ಚುನಾವಣೆ ಹಾಗೂ ಮೇಖಳಿ, ಜಲಾಲಪುರ, ನಾಗರಾಳ, ನಿಪನಾಳ ಗ್ರಾಪಂ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದೆ. ನಾಗರಾಳ ಗ್ರಾಪಂ ವಾರ್ಡ್ ನಂ. 8ಕ್ಕೆ ನಡೆದ ಉಪಚುನಾವಣೆಯಲ್ಲಿ ಶಿವಾನಂದ ಅಪ್ಪಾಸಾಬ ಮಗದುಮ್ಮ, ನಿಪನಾಳ ಗ್ರಾಪಂ ವಾರ್ಡ್ ನಂ. 1ರಲ್ಲಿ ರೇಣುಕಾ ಚಂದ್ರಪ್ಪ ಪಡತರಿ, ಜಲಾಲಪುರ ಗ್ರಾಪಂ ವಾರ್ಡ್ ನಂ. 3ರಲ್ಲಿ ಮಹಾದೇವ ವಿಠ್ಠಲ ಸಿಂಗಾಡಿ ಹಾಗೂ ಮೇಖಳಿಯ ವಾರ್ಡ್ ನಂ. 3ರಲ್ಲಿ ಮಾಯವ್ವ ಸಿದ್ದಪ್ಪ ಕಾಂಬಳೆ ಗೆಲುವು ಸಾಧಿಸಿದ್ದಾರೆ. ಯಡ್ರಾಂವ ಗ್ರಾಪಂನ 8 ಸ್ಥಾನಗಳಿಗೆ ಕಲ್ಲಪ್ಪ ನಿಂಗನೂರೆ, ಸೀಮಾ ಖೋತ, ಮಹಾಲಿಂಗ ಪಾಥರವಾಡ, ಅಕ್ಕವ್ವ ಐಹೊಳೆ, ಶಶಿಕಾಂತ ಮಾಳಿ, ವಿಶಾಲ ಪಡಲಾಳೆ, ಅಶ್ವಿನಿ ಧನಗರ, ಶಾಂತಾ ವಡ್ಡರ ಗೆಲುವು ದಾಖಲಿಸಿದ್ದಾರೆ.
ಸಿದ್ದಾಪುರ ಗ್ರಾಪಂನ 9 ಸ್ಥಾನಗಳಿಗೆ ಮಾದೇವಿ ಘಸ್ತಿ, ಬೇಬಿಜಾನ್ ಚಿಂಚಲಿ, ಮೀನಾಕ್ಷಿ ಹಟ್ಟಿ, ಮಲಗೌಡ ಪಾಟೀಲ, ಕಲ್ಲಪ್ಪ ಗಾಣಿಗೇರ, ಸವಿತಾ ದಳವಾಯಿ, ವಿದ್ಯಾ ಯಳಗೂಡ, ರಾಮಪ್ಪ ಪಾಟೀಲ ಹಾಗೂ ರಾಜಗೌಡ ಗುಡೋಡಗಿ ಗೆದ್ದಿದ್ದಾರೆ. ಯಲ್ಪಾರಟ್ಟಿ ಗ್ರಾಪಂನ 10 ಸ್ಥಾನಗಳಿಗೆ ಗಿರಿಜಾ ಮಾಂಗ , ಅನಿತಾ ದಳವಾಯಿ, ಶಿವಾನಂದ ಜಂಬಗಿ, ಸಿದ್ದಪ್ಪ ಖೋತ, ಅನಿತಾ ಶಿರಗಾಂವಿ, ನೀಲಾಬಾಯಿ ಬೆಕ್ಕೇರಿ, ಕಮಲವ್ವ ನಾಯಿಕ, ರವೀಂದ್ರ ಖವಟಕೊಪ್ಪ, ಮಂಗಲ ಕೋಳಿ ಹಾಗೂ ಸಿದ್ದಪ್ಪಕರೋಲಿ ವಿಜಯ ಪತಾಕೆ ಹಾರಿಸಿದ್ದಾರೆ. ಯಡ್ರಾಂವ ಗ್ರಾಪಂಗೆ ಆಯ್ಕೆಯಾದ ಬಿಜೆಪಿ ಬೆಂಬಲಿತ ಸದಸ್ಯರನ್ನು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಸತ್ಕರಿಸಿದರು. ಭರತೇಶ ಬನವಣೆ, ಮಲ್ಲಿಕಾರ್ಜುನ ಕೋರೆ, ಲಕ್ಷ್ಮಣ ಕೋಟಿವಾಲೆ, ಬಿ.ಎ. ಪಾಟೀಲ, ಭೀಮಪ್ಪ ಮುಧೋಳೆ, ಪೃಥ್ವಿರಾಜ ಜಾಧವ, ಬಸವರಾಜ ಡೊಣವಾಡೆ ಇತರರು ಇದ್ದರು.