ಗ್ರಾಪಂ ಚುನಾವಣೆ ಪ್ರಯುಕ್ತ ಮದ್ಯ ಮಾರಾಟ ನಿಷೇಧ

Alcohol
Published on

ಮೈಸೂರು: ಗ್ರಾಮ ಪಂಚಾಯಿತಿ ಉಪ ಚುನಾವಣೆ ಸಂಬಂಧ ಮತದಾನದ ಕಾರ್ಯವನ್ನು ಸುಸೂತ್ರವಾಗಿ ನಡೆಸಲು ಹಾಗೂ ಶಾಂತಿಯುತವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ಮೈಸೂರು ತಾಲೂಕಿನ ಜಯಪುರ, ಸೋಮೇಶ್ವರಪುರ, ವರುಣ, ತಿ.ನರಸೀಪುರ ತಾಲೂಕಿನ ಟಿ.ದೊಡ್ಡಪುರ, ಕೊತ್ತೇಗಾಲ,ಕಲಿಯೂರು, ಹುಣಸೂರು ತಾಲೂಕಿನ ಬಿಳಿಗೆರೆ, ಮುಳ್ಳೂರು, ಉಮ್ಮತ್ತೂರು, ಸಾಲಿಗ್ರಾಮ ತಾಲೂಕಿನ ಹಳಿಯೂರು, ಲಕ್ಷ್ಮೀಪುರ, ಪಿರಿಯಾಪಟ್ಟಣ ತಾಲೂಕಿನ ಮಾಲಂಗಿ, ಬೆಟ್ಟದಪುರ, ಪಂಚವಳ್ಳಿ, ಸರಗೂರು ತಾಲೂಕಿನ ಮುಳ್ಳೂರು, ಬಿ ಮಟಕೆರೆ,

ನಂಜನಗೂಡು ತಾಲೂಕಿನ ಕಾರ್ಯ, ಹುಳಿಮಾವು ಹಾಗೂ ಕುರಿಹುಂಡಿ ಗ್ರಾಮ ಪಂಚಾಯಿತಿಗಳಲ್ಲಿ ನ.21ರಂದು ಸಂಜೆ 5ರಿಂದ 23 ರ ಮಧ್ಯರಾತ್ರಿ 12ರವರೆಗೆ ಎಲ್ಲ ರೀತಿಯ ಮದ್ಯದ ಅಂಗಡಿಗಳನ್ನು ಮುಚ್ಚಲು ಮತ್ತು ಮದ್ಯ ಮಾರಾಟ, ಸಾಗಣೆ, ಶೇಖರಣೆಯನ್ನು ನಿಷೇಧಿಸಿ ಒಣ ದಿವಸ ಎಂದು ಘೋಷಿಸಲಾಗಿದೆ.

ಎಲ್ಲ ಮದ್ಯದ ಅಂಗಡಿಗಳನ್ನು ಹಾಗೂ ಮದ್ಯ ತಯಾರಿಕಾ ಘಟಕ ಮುಚ್ಚಿಸಿ ಮೊಹರು ಮಾಡಿ ಅದರ ಕೀಯನ್ನು ಸಂಬಂಧಪಟ್ಟ ಅಧಿಕಾರಿಗೆ ಒಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜತೆಗೆ, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಂತೆ, ಜಾತ್ರೆಗಳನ್ನು ನಿಷೇಧಿಸಲಾಗಿದೆ. ನ.23ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಇದು ಜಾರಿಯಲ್ಲಿರಲಿದೆ ಎಂದು ಡಿಸಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net