ಗ್ರಾಪಂ ಚುನಾವಣೆ, ಒಂದಾದ ಕೈ ಕಮಲ ತೆನೆ!

PH 01
Published on

ಯಡ್ರಾಮಿ(ಅರಳಗುಂಡಗಿ): ಗ್ರಾಮ ಪಂಚಾಯಿತಿಯ ಎರಡನೇ ಅವಧಿ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿದ ಅಪರೂಪದ ಪ್ರಸಂಗ ಗುರುವಾರ ನಡೆಯಿತು. ಅಧ್ಯಕ್ಷರಾಗಿ ಬೌರಮ್ಮ ಜೊತೆಪ್ಪಗೋಳ, ಉಪಾಧ್ಯಕ್ಷರಾಗಿ ಸ್ವಪ್ನಾ ಕಡಿ ಆಯ್ಕೆಯಾದರು.

ಒಟ್ಟು 25 ಸದಸ್ಯರಿದ್ದು, ಅಧ್ಯಕ್ಷ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಎಸ್‌ಸಿಗೆ ಮೀಸಲಾಗಿತ್ತು. ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಅಧಿಕೃತವಾಗಿ ಲಕ್ಷ್ಮೀಬಾಯಿ ಗೊಬ್ಬರಡಗಿ- ಚಂದ್ರಕಾಂತ ಕಟ್ಟಿಮನಿ ಸ್ಪರ್ಧಿಸಿದ್ದರು. ಇವರ ವಿರುದ್ಧ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಬೌರಮ್ಮ ಹಾಗೂ ಸ್ವಪ್ನಾ ಉಮೇದುವಾರಿಕೆ ಸಲ್ಲಿಸಿದ್ದರು. ಬೌರಮ್ಮ 15 ಮತ್ತು ಸ್ವಪ್ನಾ 13 ವೋಟ್ ಪಡೆದು ಗೆಲುವು ಸಾಧಿಸಿದರು. ಕಾಂಗ್ರೆಸ್ ಬೆಂಬಲಿತರಾಗಿ ಕಣಕ್ಕಿಳಿದಿದ್ದ ಲಕ್ಷ್ಮೀ ಬಾಯಿ 10, ಚಂದ್ರಕಾಂತ 12 ಮತ ಪಡೆದು ಪರಾಭವಗೊಂಡರು. ಮಹಾಂತೇಶ ಪುರಾಣಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ಮುಖಂಡರಾದ ಬಸವರಾಜಗೌಡ ಮಾಲಿಪಾಟೀಲ್, ಗೊಲ್ಲಾಳಪ್ಪ ಕಡಿ, ಪ್ರೇಮನಗೌಡ ಬಿರಾದಾರ, ರೇವಣಸಿದ್ದಪ್ಪಗೌಡ ಕಮಾನಮನಿ, ನಾಗನಗೌಡ ಮುದುಬಸಪ್ಪಗೋಳ, ಗಿರಿಜಾಶಂಕರ ರಾಮನಗೊಳ, ಕರೆಪ್ಪಗೌಡ ಮುರಗಾನೂರ, ಮಾಳು ಪೂಜಾರಿ, ಲಕ್ಷ್ಮಣ್, ಕಾಶೀನಾಥ ಹಳಿಮನಿ, ಅಂಬರೀಷ, ಶಿವು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net